ಬಾಲಭಾಸ್ಕರ್ ಮತ್ತು ಪತ್ನಿ ಲಕ್ಷ್ಮಿ (ಸಂಗ್ರಹ ಚಿತ್ರ) 
ದೇಶ

ಅಪಘಾತವಾದಾಗ ಬಾಲಭಾಸ್ಕರ್ ಕಾರು ಚಾಲನೆ ಮಾಡುತ್ತಿರಲಿಲ್ಲ: ಪತ್ನಿ ಲಕ್ಷ್ಮಿ ವೈರುಧ್ಯ ಹೇಳಿಕೆ

ಚಾಲಕ ಅರ್ಜುನ್ ಕಾರು ಚಲಾಯಿಸುತ್ತಿದ್ದುದೆ ಹೊರತು ನನ್ನ ಪತಿ ಅಲ್ಲ ಎಂದು ಕೇರಳದ ಖ್ಯಾತ ಸಂಗೀತಗಾರ ...

ತಿರುವನಂತಪುರ: ಚಾಲಕ ಅರ್ಜುನ್ ಕಾರು ಚಲಾಯಿಸುತ್ತಿದ್ದುದೆ ಹೊರತು ನನ್ನ ಪತಿ ಅಲ್ಲ ಎಂದು ಕೇರಳದ ಖ್ಯಾತ ಸಂಗೀತಗಾರ ಬಾಲಭಾಸ್ಕರ್ ಅವರ ಕಾರು ಅಪಘಾತ ಸಂಬಂಧ ಅವರ ಪತ್ನಿ ಲಕ್ಷ್ಮಿ ಪೊಲೀಸರಿಗೆ ವೈರುಧ್ಯ ಹೇಳಿಕೆ ನೀಡಿದ್ದಾರೆ,

ಈ ಹಿಂದೆ ಚಾಲಕ ಅರ್ಜುನ್ ಅಪಘಾತವಾದ ಸಂದರ್ಭದಲ್ಲಿ ಬಾಲ ಭಾಸ್ಕರ್ ಅವರೇ ಕಾರು ಚಲಾಯಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದರು. ಬಾಲಭಾಸ್ಕರ್ ಅವರು ಅಪಘಾತವಾದಾಗ ಹಿಂದಿನ ಸೀಟಿನಲ್ಲಿ ನಿದ್ದೆ ಮಾಡುತ್ತಿದ್ದರು ಎಂದು ಲಕ್ಷ್ಮಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ದೂರದ ಪ್ರಯಾಣ ಮಾಡುವಾಗ ಬಾಲಭಾಸ್ಕರ್ ಯಾವತ್ತಿಗೂ ಕಾರು ಓಡಿಸುತ್ತಿರಲಿಲ್ಲ. ಅಪಘಾತವಾದ ಸಂದರ್ಭದಲ್ಲಿ ತಾನು ಮಗಳು ತೇಜಸ್ವಿನಿ ಜೊತೆ ಮುಂದಿನ ಸೀಟಿನಲ್ಲಿ ಕುಳಿತಿದ್ದೆ ಎಂದಿದ್ದಾರೆ, ಎರಡು ದಿನಗಳ ಹಿಂದಷ್ಟೇ ಲಕ್ಷ್ಮಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕೊಲ್ಲಂ ಹತ್ತಿರ ಮುಟ್ಟಿದಾಗ ಬಾಲಭಾಸ್ಕರ್ ಅವರೇ ಕಾರು ಚಲಾಯಿಸಲು ಆರಂಭಿಸಿದರು ಎಂದು ಈ ಹಿಂದೆ ಅರ್ಜುನ್ ಹೇಳಿದ್ದನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಸೆಪ್ಟೆಂಬರ್ 25ರಂದು ಪಲ್ಲಿಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಬಾಲಭಾಸ್ಕರ್ ಮತ್ತು ಅವರ ಮಗಳು ಮೃತಪಟ್ಟಿದ್ದರು.  ಅವರ ಪತ್ನಿ ಲಕ್ಷ್ಮಿ ಹಾಗೂ ಕಾರಿನ ಚಾಲಕ ಅರ್ಜುನ್ ಪ್ರಾಣಾಪಾಯದಿಂದ ಪಾರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ

ಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್‌

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!