ಸಂಗಾರೆಡ್ಡಿ(ತೆಲಂಗಾಣ): ಕಾಂಗ್ರೆಸ್-ಟಿಡಿಪಿ ಮೈತ್ರಿ ಎಂದರೆ 2018ರ ಈಸ್ಟ್ ಇಂಡಿಯಾ ಕಂಪನಿ ಇದ್ದಂತೆ ಎಂದು ಆಲ್ ಇಂಡಿಯಾ ಮಜ್‌ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇಡಕ್ ಜಿಲ್ಲೆ ಸಂಗಾರೆಡ್ಡಿ ಕ್ಷೇತ್ರದ ಜಲಾಲಾ ಬಾಗ್ ಮಿಲಾದ್ ಗ್ರೌಂಡ್‌ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ್ದ ಓವೈಸಿ ಮಾತನಾಡಿದರು.
"ಈಗ ಚಂದ್ರಬಾಬು ಕಾಂಗ್ರೆಸ್ ಜತೆಗೆ ಕೈಜೋಡಿಸಿರುವುದು ಮಹಾ ಕುತುಂಬ (ಮೈತ್ರಿಕೂಟ) ಅಲ್ಲ ಬದಲಾಗಿ ಇದು 2018ರ ಈಸ್ಟ್ ಇಂಡಿಯಾ ಕಂಪೆನಿ," ಅವರು ಹೇಳಿದ್ದಾರೆ.
ಅಲ್ಲದೆ ತೆಲಂಗಣಾದ ಜನರೇ ಆ ರಾಜ್ಯದ ಅದೃಷ್ಟವನ್ನು ನಿರ್ಧರಿಸಲಿದ್ದಾರೆ ಹೊರತು ಬೇರೆಯವರಲ್ಲ ಎಂದು ಓವೈಸಿ ಹೇಳಿದರು.
"ವಿಜಯವಾಡದಲ್ಲಿರುವ ಚಂದ್ರಬಾಬು ನಾಯ್ಡು, ದೆಹಲಿಯಲ್ಲಿರುವ ಕಾಂಗ್ರೆಸ್ ಅಥವಾ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸ್ ಏವಕ ಸಂಘ ತೆಲಂಗಾಣದ ಭವಿಷ್ಯ ನಿರ್ಧರಿಸುತ್ತಾರೆಯೆ ಅಥವಾ ಇಲ್ಲಿನ ಜನರೆ?ತೆಲಂಗಾಣದ ಭವಿಷ್ಯವನ್ನು ಇಲ್ಲಿನ ಜನರೇ ನಿರ್ಧರಿಸುತ್ತಾರೆ.ಸಂಗಾರೆಡ್ಡಿಯಲ್ಲಿ ಇದು ನಿರ್ಧಾರವಾಗಲಿದೆ. ಇದು ನಿಮ್ಮ ರಾಜ್ಯ, ವಿಜಯವಾಡ, ನಾಗ್ಪುರ್ ಅಥವಾ ದೆಹಲಿಯ ಯಾರೂ ನಿಮ್ಮ ರಾಜ್ಯದ ಅದೃಷ್ಟವನ್ನು ಸೂಚಿಸಲು ಸಾಧ್ಯವಿಲ್ಲ. ಈ ಆಧುನಿಕ ಈಸ್ಟ್ ಇಂಡಿಯಾ ಕಂಪನಿಯನ್ನು ಮರಳಿ ಅದರ ಸ್ವಸ್ಥಾನಕ್ಕೆ ಕಳಿಸಬೇಕಾಗಿದೆ. "
ನವೆಂಬರ್ 1ರಂದು ಚಂದ್ರಬಾಬು ನಾಯ್ಡು ಹಾಗೂ ರಾಹುಲ್ ಗಾಂಧಿ ಮುಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ತಾವಿಬ್ಬರೂ ಒಟ್ಟಾಗಿ ಬಿಜೆಪಿಯನ್ನು ಎದುರಿಸುವುಉದಾಗಿ ಘೋಷಿಸಿದ್ದರು.
119 ಸದಸ್ಯ ಬಲದ ತೆಲಂಗಆಣ ವಿಧಾನಸಭೆಗೆ ಡಿಸೆಂಬರ್ 7ರಂದು ಮತದಾನ ನಡೆಯಲಿದ್ದು ಡಿಸೆಂಬರ್ 11ರಂದು ಮತ ಎಣಿಕೆ ನಡೆಯಲಿದೆ.