ದೇಶ

ದೆಹಲಿ: ಕುಡಿದ ಮತ್ತಿನಲ್ಲಿ 18 ವಾಹನಗಳಿಗೆ ಬೆಂಕಿ ಹಚ್ಚಿದ ವ್ಯಕ್ತಿ

Shilpa D
ನವದೆಹಲಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ 18 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ದಕ್ಷಿಣ ದೆಹಲಿಯ ಮದಂಗೀರ್ ನಲ್ಲಿ ದೂರು ದಾಖಲಾಗಿದೆ.
ಪೆಟ್ರೋಲ್ ಪೈಪ್ ತೆರೆದು ಬೆಂಕಿ ಹಚ್ಚುವ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ,. ಆರು ಮೋಟಾರ್ ಸೈಕಲ್ ಗಳ ಮೇಲೆ ಪೆಟ್ರೋಲ್ ಹರಿಸಿ ಬೆಂಕಿ ಪೊಟ್ಟಣದಿಂದ ಬೆಂಕಿ ಹಚ್ಚಿದ್ದಾನೆ. ಪಕ್ಕದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಆವರಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಮಾಹಿತಿ ಪಡೆದಿದ್ದಾರೆ, ಆದರೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸುಟ್ಟ ವಾಹನಗಳಲ್ಲಿ 8 ದ್ವಿಚಕ್ರ ವಾಹನ ಹಾಗೂ 2 ಕಾರುಗಳು ಸಂಪೂರ್ಣ ಭಸ್ಮವಾಗಿವೆ, ಆರು ಮೋಟಾರ್ ಸೈಕಲ್ ಮತ್ತು ಎರಡು ಕಾರುಗಳು ಭಾಗಶಃ ಸುಟ್ಟು ಹೋಗಿವೆ. 
SCROLL FOR NEXT