ಮಾಡ್ರೆನ್ ಯುಗದಲ್ಲಿ ಬಟ್ಟೆ ತೊಡುವ ಕ್ರಮ ಬದಲಾಗುತ್ತಿದೆ. ಗೃಹಿಣಿಯರು ಮೈತುಂಬಾ ಸೀರೆ ಉಡುವ ಪದ್ಧತಿ ಬದಲಾಗುತ್ತಿದ್ದು ಶಾರ್ಟ್ ಅಂಡ್ ಸ್ವೀಟ್ ರೀತಿಯಲ್ಲಿ ನೈಟಿ ತೊಡುತ್ತಿದ್ದಾರೆ. ಆದರೆ ಈ ಊರಲ್ಲಿ ನೈಟಿ ತೊಟ್ಟರೆ ಅಂತಹ ಮಹಿಳೆಯರಿಗೆ ಕಂಟಕ ಎದುರಾಗಲಿದೆ.
ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ನೈಟಿ ತೊಡುವುದಕ್ಕೆ ನಿಷೇಧ ಹೇರಲಾಗಿದೆ. ಪ್ರಮುಖವಾಗಿ ಹರಿಯಾಣದಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ತೊಡುವ ಕೆಲ ಬಟ್ಟೆಗಳ ಮೇಲೆ ನಿಷೇಧ ಹೇರಲಾಗಿದೆ.
ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಇಂತಹ ನಿಷೇಧಗಳು ಕಡಿಮೆ ಎನ್ನಬಹುದು. ಆದರೆ ಇದೀಗ ಅಪಖ್ಯಾತಿ ಎಂಬಂತೆ ದಕ್ಷಿಣ ಭಾರತದಲ್ಲೂ ಇಂತಹ ನಿಷೇಧಕ್ಕೆ ಈ ಗ್ರಾಮ ಸಾಕ್ಷಿಯಾಗಿದೆ. ಆಂಧ್ರದ ಗೋದಾವರಿ ಜಿಲ್ಲೆಯ ತೋಕಲಪಲ್ಲಿಯಲ್ಲಿ ಮಹಿಳೆಯರು ನೈಟಿ ತೊಟ್ಟರೆ ಅವರಿಗೆ 2 ಸಾವಿರ ರುಪಾಯಿ ದಂಡ ವಿಧಿಸಲಾಗುತ್ತದೆ.