ನವದೆಹಲಿ: ಎಂ 777 ಅಮೇರಿಕನ್ ಅಲ್ಟ್ರಾ ಲೈಟ್ ಹೊವಿಟ್ಜರ್ ಗಳು, ಕೆ9 ವಜ್ರಸೇರಿದಂತೆ ಮೂರು ಪ್ರಮುಖ ಫಿರಂಗಿ ಗನ್ ವ್ಯವಸ್ಥೆಗಳನ್ನು ಭಾರತ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇನೆಗೆ ಸೇರ್ಪಡೆಗೊಳಿಸಿದ್ದಾರೆ.
ಇದಲ್ಲದೆ ಕಂಪೋಸಿಟ್ ಗನ್ ಟೋವಿಂಗ್ ವಾಹನವನ್ನು ಸಹ ಸೇನೆಗೆ ಸೇರ್ಪಡೆ ಮಾಡಲಾಗಿದ್ದು ಇದಾಗಲೇ ಬಳಕೆಯಲ್ಲಿರುವ ವಿವಿಧ ಗನ್ ಗಳ ಸಾಗಣೆಗೆ ಇದು ನೆರವಾಗಲಿದೆ. ಇನ್ನು ಕೆ9 ವಜ್ರ ಎನ್ನುವುದು ಸ್ವಯಂ ಚಾಲಿತ ಫಿರಂಗ್ ಗನ್ ಆಗಿದೆ.
ರೆಜಿಮೆಂಟ್ ಸ್ಥಾಪನೆಗಾಗಿ ಮುಂಬರುವ ಸಮಾರಂಬಕ್ಕೆ ಪೂರ್ವಭಾವಿಯಾಗಿ ಎಂ 777 ಹಾಗೂ ಕೆ9 ವಜ್ರಬಂದೂಕುಗಳನ್ನು ಮುಂದಿನ ವರ್ಷ ಮಧ್ಯ ಭಾಗದಲ್ಲಿ ಸೇನೆ ಕಾರ್ಯಾಚರಣೆಗೆ ಬಳಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 145 ಎಂ 777 ಬಂದೂಕುಗಳನ್ನು ಭಾರತವು ವಿದೇಶಿ ಮಿಲಿಟರಿ ಮಾರಾಟದ ಯೋಜನೆಯಡಿಯಲ್ಲಿ ಅಮೆರಿಕಾದಿಂದ ಖರೀದಿಸಲು ನವೆಂಬರ್ 2016ರಲ್ಲಿ ಒಡಣ್ಬಡಿಕೆ ಮಾಡಿಕೊಂಡಿತ್ತು. ಇದಕ್ಕಾಗಿ 5,070 ಕೋಟಿ ರೂ. ಒಪ್ಪಂದವಾಗಿದೆ.. ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಣೆಯಲ್ಲಿ ಬಳಸಲಾದ ಎಂ 777 ಬಂದೂಕುಗಳನ್ನು ಹೆಲಿಕಾಪ್ಟರ್ ಮೂಲಕ ಸುಲಭವಾಗಿ ಒಂದು ಪ್ರದೇಶದಿಂದ ಇನ್ನೊಂದು ಕಡೆಗೆ ಸುಲಭವಾಗಿ ಸಾಗಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics