ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಾಲ್ 
ದೇಶ

ಅಂಬಾನಿ ಪುತ್ರಿಯ ಈ ಮದುವೆ ಆಮಂತ್ರಣ ಪತ್ರಿಕೆ ಬೆಲೆ 3 ಲಕ್ಷ!

ಭಾರತದ ನಂಬರ್ ಒನ್ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ಒಡೆಯರಾದ ಮುಖೇಶ್ ಅಂಬಾನಿ ಇದೀಗ ತಮ್ಮ ಮಗಳ ಮದುವೆ ಸಂಭ್ರದಲ್ಲಿದ್ದಾರೆ.

ಮುಂಬೈ: ಭಾರತದ ನಂಬರ್ ಒನ್ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ಒಡೆಯರಾದ ಮುಖೇಶ್ ಅಂಬಾನಿ ಇದೀಗ ತಮ್ಮ ಮಗಳ ಮದುವೆ ಸಂಭ್ರದಲ್ಲಿದ್ದಾರೆ.
ಮುಖೇಶ್ ಅಂಬಾನಿ ಮಗಳು ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಾಲ್ ಅವರುಗಳ ಮದುವೆ  ಎಂದ ಮೇಲೆ ಅದು ಅಂತಿಥಾ ಮದುವೆಯಾಗಿರದೆ ಅದ್ದೂರಿ ಸಂಭ್ರಮದ ವಿವಾಹವೇ ಆಗಿರುತ್ತದೆ ಎನ್ನುವುದು ಖಚಿತ. ಇದೀಗ ಅವರ ವಿವಾಹದ ಆಮಂತ್ರಣ ಪತ್ರಿಕೆ ಹೊರಬಂದಿದ್ದು ಇದಕ್ಕಾಗಿ ಬರೋಬ್ಬರಿ ಮೂರು ಲಕ್ಷ ರು. ವೆಚ್ಚವಾಗಿದೆ.
ಇಶಾ ಅಂಬಾನಿ ಮದುವೆಗಾಗಿ ವೀಡಿಯೋ ಆಮಂತ್ರಣ ಪತ್ರಿಕೆ ತಯಾರಿಸಿದ್ದು ಆಮಂತ್ರಣ ಪತ್ರಿಕೆಯನ್ನು ಎರಡು ಬಾಕ್ಸ್ ಗಳಲ್ಲಿ ಇಡಲಾಗಿದೆ.ಮೊದಲ ಬಾಕ್ಸ್ ನಲ್ಲಿ ಇಶಾ ಹಾಗೂ ಆನಂದ್ ಅವರ ಹೆಸರಿನ ಮೊದಲ ಅಕ್ಷರ ಸೇರಿಸಿ ಐಎ ಎಂದು ಮುದ್ರಿಸಿಅಲಾಗಿದೆ.
ಬಿಳಿ ಹಾಗೂ ತಿಳಿ ಗುಲಾಬಿ ಬಣ್ಣದ ಹೂವುಗಳಿಂದ ಅಲಂಕೃತವಾಗಿರುವ ಈ ಬಾಕ್ಸ್ ತೆರೆದರೆ ಗಾಯತ್ರಿ ಮಂತ್ರದ ಟ್ಯೂನ್ ಕೇಳಿ ಬರುತ್ತದೆ. ಇಇದರಲ್ಲಿ ಆಭರಣಗಳಿರುವಂತಹಾ ನಾಲ್ಕು ಪುಟ್ಟ ಪೆಟ್ಟಿಗೆಗಳಿದ್ದು ಅವುಗಳಲ್ಲಿ  ಪುಟಾಣಿ ಚೀಲಗಳಲ್ಲಿ ಬೆಲೆಬಾಳುವ ಕಲ್ಲು, ಹರಳುಗಳನ್ನು ಇಡಲಾಗಿದೆ.ನೆಕ್ಲೇಸ್, ಸರಗಳು, ಚಿನ್ನದ ಚೌಕಟ್ಟುಗಳಿರುವ ದೇವರ ಪಟಗಳು ಸಹ ಇದೇ ಪೆಟ್ಟಿಗೆಯಲ್ಲಿದೆ.
ಅಲ್ಲದೆ ಇನ್ನೊಂದು ಪೆಟ್ಟಿಗೆಯಲ್ಲಿ ಚೆನ್ನಾದ ಚಿತ್ತಾರದ ಹಿನ್ನೆಲೆಯಲ್ಲಿ ವಿವಾಹದ ಆಮಂತ್ರಣ ನೀಡಲಾಗಿದೆ. ಚಿನ್ನದ ಬಣ್ಣದಲ್ಲಿರುವ ಹಾಳೆ ಇದ್ದು  ನಾಲ್ಕನೇ ಪುಟದಲ್ಲಿ ಇಶಾ ಹಾಗೂ ಆನಂದ್ ಬರೆದ ಪತ್ರಗಳಿದೆ.ಇತರೆ ಪುಟಗಳಲ್ಲಿ ಶುಭ್ ಅಭಿನಂದನ್’ ತಲೆಬರಹದಡಿಯಲ್ಲಿ ಹಲವಾರು ಸಂಗತಿಯನ್ನು ಬರೆಯಲಾಗಿದೆ.
ಪಿರಮಲ್‌ ರಿಯಾಲ್ಟಿಯ ಸಂಸ್ಥಾಪಕ ಅಜಯ್‌ ಪಿರಮಲ್‌ರ ಪುತ್ರನಾದ ಆನಂದ್‌ ಪಿರಮಲ್‌ ಅವರೊಡನೆ ಅಂಬಾನಿ ಪುತ್ರಿ ಇಶಾ ವಿವಾಹ ಡಿ.12ಕ್ಕೆ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT