ಪ್ರೊ. ಟಿ.ಎನ್. ಶ್ರೀನಿವಾಸನ್
ಚೆನ್ನೈ: ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ಟಿ.ಎನ್. ಶ್ರೀನಿವಾಸನ್ (ತಿರುಕೊದಿಕಾವಲ್ ನೀಲಕಂಠ ಶ್ರೀನಿವಾಸನ್) (85) ಶನಿವಾರ ಚೆನ್ನೈನಲ್ಲಿ ನಿಧನರಾದರು.
"ಭಾರತದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಶ್ರೀನಿವಾಸನ್ ಸಾವನ್ನಪ್ಪಿದ್ದಾರೆ.ಅವರು ಅತ್ಯುತ್ತಮ ಪರಂಪರೆಮ್ ಅಭಿವೃದ್ದಿ ಅರ್ಥಶಾಸ್ತ್ರಕ್ಕೆ ನೀಡಿದ ಕೊಡುಗೆಗಳಿಂದ, ವಿದ್ಯಾರ್ಥಿಗಳ ಬೆಳವಣಿಗೆ ಗಳಿಗೆ ಹೆಸರಾಗಿದ್ದರು ಎಂದು ಭಾರತ ಸರ್ಕಾರಮಾಜಿ ಮುಖ್ಯ ಆರ್ಥಿಕ ಸಲಹೆಗಾರ. ಅರವಿಂದ ಸುಬ್ರಹ್ಮಣ್ಯನ್,ಹೇಳಿದ್ದಾರೆ.
ಮಾರ್ಚ್ 1933 ರಲ್ಲಿ ಜನಿಸಿದ ಶ್ರೀನಿವಾಸನ್ ಕೋಲ್ಕತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ಸ್ಟಾಟಿಸ್ಟಿಕ್ಸ್ ವಿಷಯದಲ್ಲಿ ಬಿಎ, ಎಂಎ ಪದವಿ ಪಡೆದಿದ್ದರು.
1977ರಲ್ಲಿ ವಿಶ್ವ ಬ್ಯಾಂಕ್ ಅಭಿವೃದ್ದಿ ಸಂಶೋಧನಾ ಕೇಂದ್ರದ ವಿಶೇಷ ಸಲಹೆಗಾರರಾಗಿದ್ದ ಶ್ರೀನಿವಾಸನ್ ಕಳೆದ ನಾಲ್ಕು ದಶಕಗಳಲ್ಲಿ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಯ್ಥೆಗ:ಳಲ್ಲಿ ಪ್ರಾದ್ಯಾಪಕರಾಗಿ,ಸೇವೆ ಸಲ್ಲಿಸಿದ್ದರು.
1991ರಲ್ಲಿ ಮನಮೋಹನ್ ಸಿಂಗ್ ಜಾರಿಗೆ ತಂದಿದ್ದ ಆರ್ಥಿಕ ಸುಧಾರಣೆಗಳಿಗೆ ಶ್ರೀನಿವಾಸನ್ ಮಂಡಿಸಿದ್ದ ವಿದೇಶ ವ್ಯಾಪಾರ ಕ್ಷೇತ್ರದಲ್ಲಿನ ಸುಧಾರಣೆಗಳ ಕುರಿತ ಪ್ರಬಂಧವೇ ಮೂಲವಾಗಿತ್ತು. ವ್ಯಾಪಾರ ವ್ಯವಹಾರಗಳ ಮೇಲೆ ನಿಯ್ತಂತ್ರಣಕ್ಕೆ ಸರ್ಕಾರದ ಕ್ರಮ ಮತ್ತು ಪಾತ್ರದ ಬಗ್ಗೆ ಅವರು ತಮ್ಮ ಅದ್ಯಯನಗಳಲ್ಲಿ ಪ್ರತಿಪಾದನೆ ಮಾಡಿದ್ದರು.
ಅಭಿವೃದ್ದಿ ಅರ್ಥಶಾಸ್ತ್ರಕ್ಕೆ ಅವರು ಸಲಿಸಿದ್ದ ಸೇವೆ ಪರಿಗಣಿಸಿ ಪದ್ಮಭೂಷಣ ಪ್ರಶಸ್ತಿ ಸಲ್ಲಿಸಿ ಗೌರವಿಸಲಾಗಿತ್ತು.
ಶ್ರೀನಿವಾಸನ್ ನಿಧನಕ್ಕೆ ಮಾಜಿ ಸಚಿವ ಜೈರಾಮ್ ರಮೇಶ್ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos