ದೇಶ

ಭಾರತ​ ಮಾತಾಕೀ ಜೈ, ಜೈ ಹಿಂದ್​ ಎಂದು ಕಿರುಚುವುದಷ್ಟೇ ದೇಶಭಕ್ತಿಯಲ್ಲ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

Srinivasamurthy VN
ಮುಂಬೈ: 'ಭಾರತ್​ ಮಾತಾಕೀ ಜೈ, ಜೈ ಹಿಂದ್' ಎಂದು ಕಿರುಚುವುದಷ್ಟೇ ದೇಶಭಕ್ತಿಯಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶುಕ್ರವಾರ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ದೇಶದ 130 ಕೋಟಿ ಜನರ ಬದುಕಿನ ಉನ್ನತಿಗಾಗಿ ಎಲ್ಲರೂ ಶ್ರಮಿಸುವುದು ನಿಜಯವಾದ ದೇಶಭಕ್ತಿ, ರಾಷ್ಟ್ರೀಯತೆ ಎಂದು ಹೇಳಿದ್ದಾರೆ. ಇದೇ ವೇಳೆ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶಭಕ್ತಿಯ ಕುರಿತು ನೀಡಿದ್ದ ವ್ಯಾಖ್ಯಾನವೊಂದನ್ನು ಉಲ್ಲೇಖಿಸುತ್ತಾ, 'ಪ್ರಧಾನಿ ಮೋದಿ ನನ್ನ ಬಳಿ ಒಂದು ಬಾರಿ ದೇಶಭಕ್ತಿಯ ಕುರಿತು ಮಾತನಾಡುತ್ತಾ, 'ಪ್ರತಿಯೊಬ್ಬರೂ ಅವರವರ ಕೆಲಸಗಳನ್ನು ಮಾಡಿದರೆ ಅದೇ ನಿಜವಾದ ದೇಶಭಕ್ತಿ,' ಎಂದು ಹೇಳಿದ್ದರು. ಅದರೆ, ಪ್ರತಿಯೊಬ್ಬರೂ ಅವರವರ ಕೆಲಸ ಮಾಡುತ್ತಾರೆ. ಅದರಲ್ಲೇನಿದೆ? ಎಂದು ಪ್ರಶ್ನಿಸಿದ್ದೆ. 
'ಎಲ್ಲರೂ ಅವರವರ ಕೆಲಸ ಮಾಡುವುದೇ ದೇಶಪ್ರೇಮ, ಎಂದು ಅವರು ಪುನರುಚ್ಚರಿಸಿದರು ಹೇಳಿದರು. ಅವರ ಮಾತಿನಲ್ಲಿ ಒಂದು ಅರ್ಥವಿತ್ತು. ಸಿನಿಮಾಗಳಿಂದ ಪ್ರೇರಣೆಗೊಂಡು ಭಾರತ ಮಾತಾಕೀ ಜೈ, ಜೈ ಹಿಂದ್​ ಎಂದು ಅರಚುವುದು, ಭಾರತ ಮಾತೆಯ ಚಿತ್ರಕ್ಕೆ ನಮನ ಸಲ್ಲಿಸುವುದಷ್ಟೇ ದೇಶಭಕ್ತಿಯಲ್ಲ. ದೇಶದ 130 ಕೋಟಿ ಜನರೂ ಅಭಿವೃದ್ಧಿ ಹೊಂದುವತ್ತ ಕೆಲಸ ಮಾಡುವುದೇ ದೇಶ ಪ್ರೇಮ. ಅದುವೇ ರಾಷ್ಟ್ರೀಯತೆ, ಜಾಗತೀಕರಣಗೊಂಡಿರುವ ಈ ಯುಗದಲ್ಲಿ, ವಿದೇಶಿ ನೇರ ಬಂಡವಾಳಗಳು ಹರಿದು ಬರುತ್ತಿರುವ ಈ ಹೊತ್ತಿನಲ್ಲಿ ಸ್ಥಳೀಯ ಉದ್ದಿಮೆಗಳಿಗೂ ನಾವು ಪ್ರೋತ್ಸಾಹ ನೀಡಬೇಕು. ಗಾಂಧೀಜಿ ಕೂಡ ಅದನ್ನೇ ಹೇಳಿದ್ದರು ಎಂದು ನಾಯ್ಡು ಹೇಳಿದರು.
SCROLL FOR NEXT