ದೇಶ

ಬಾಹ್ಯಾಕಾಶದಿಂದಲೂ ಗೋಚರಿಸುತ್ತಿದೆ ವಿಶ್ವದ ಅತಿ ಎತ್ತರದ ಪ್ರತಿಮೆ!

Srinivasamurthy VN
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಏಕತೆ ಪ್ರತಿಮೆ ಮತ್ತು ವಿಶ್ವದ ಅತೀ ಎತ್ತರದ ಪ್ರತಿಮೆ ಬಾಹ್ಯಾಕಾಶದಿಂದಲೂ ಸ್ಪಷ್ಚವಾಗಿ ಗೋಚರಿಸುತ್ತಿದೆ.
ಹೌದು.. ಗುಜರಾತ್ ನ ನರ್ಮದಾ ನದಿ ತೀರದಲ್ಲಿ ನಿರ್ಮಿಸಲಾಗಿರುವ ಸುಮಾರು 597 ಅಡಿ ಎತ್ತರದ ಸರ್ದಾರ್​ ವಲ್ಲಭಭಾಯಿ ಪಟೇಲರ ಏಕತಾ ಪ್ರತಿಮೆಯ ಚಿತ್ರವನ್ನು ಅಮೆರಿಕದ ವಾಣಿಜ್ಯ ಉಪಗ್ರಹವೊಂದು ಬಾಹ್ಯಾಕಾಶದಿಂದ ಸೆರೆಹಿಡಿದಿದೆ. ವಿಶ್ವದ ಅತೀ ಎತ್ತರದ ಪ್ರತಿಮೆ ಎಂದು ಖ್ಯಾತಿ ಪಡೆದಿರುವ ಸರ್ದಾರ್ ವಲ್ಲಭಬಾಯ್ ಪಟೇಲರ ಪ್ರತಿಮೆ ಲೋಕಾರ್ಪಣೆಯಾದ  ಬಳಿಕ ಇದೇ ಮೊದಲ ಬಾರಿಗೆ ಬಾಹ್ಯಾಕಾಶದಿಂದ ಪ್ರತಿಮೆಯ ಚಿತ್ರ ತೆಗೆಯಲಾಗಿದೆ.
ಅಮೆರಿಕಾದ ಸ್ಕೈಸ್ಯಾಟ್​ ಎಂಬ ಉಪಗ್ರಹ ಈ ಚಿತ್ರವನ್ನು ನ. 15ರಂದು ಸೆರೆ ಹಿಡಿದಿದೆ, ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಲಾಗಿದೆ. ಅತ್ಯಂತ ಎತ್ತರದಿಂದ ತೆಗೆಯಲಾಗಿರುವ ಈ ಉಪಗ್ರಹ ಛಾಯಾಚಿತ್ರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.
SCROLL FOR NEXT