ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲಾ 
ದೇಶ

ಪರಿಕ್ಕರ್-ಸೋನಿಯಾ ಅನಾರೋಗ್ಯದ ಜೊತೆಗೆ ಹೋಲಿಕೆ ಬೇಡ: ಕಾಂಗ್ರೆಸ್

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹಾಗೂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿಯವರ ಆರೋಗ್ಯವನ್ನು ಹೋಲಿಕೆ ಮಾಡಬಾರದು ಎಂದು ಕಾಂಗ್ರೆಸ್ ಹೇಳಿದೆ...

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹಾಗೂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿಯವರ ಆರೋಗ್ಯವನ್ನು ಹೋಲಿಕೆ ಮಾಡಬಾರದು ಎಂದು ಕಾಂಗ್ರೆಸ್ ಹೇಳಿದೆ. 
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲಾ ಅವರು, ಮನೋಹರ್ ಪರಿಕ್ಕರ್ ರಾಜ್ಯದ ಮುಖ್ಯಮಂತ್ರಿ. ಸೋನಿಯಾ ಗಾಂಧಿಯವರು ಅನಾರೋಗ್ಯಕ್ಕೀಡಾದಾಗ ಪ್ರಧಾನಮಂತ್ರಿಯೂ ಆಗಿರಲಿಲ್ಲ, ಸಚಿವರೂ ಆಗಿರಲಿಲ್ಲ. ಹೀಗಾಗಿ ಸೋನಿಯಾ ಆರೋಗ್ಯದ ಜೊತೆಗೆ ಪರಿಕ್ಕರ್ ಆರೋಗ್ಯವನ್ನು ಹೋಲಿಕೆ ಮಾಡಬಾರದು ಎಂದು ಹೇಳಿದ್ದಾರೆ. 
ಅಧಿಕಾರದಲ್ಲಿದ್ದವರು, ಪ್ರಮುಖವಾಗಿ ಒಂದು ರಾಜ್ಯದ ಜವಾಬ್ದಾರಿ ಹೊತ್ತವರು, ಸಾರ್ವಜನಿಕರ ಹಿತಾಸಕ್ತಿಗಳಿಗಾಗಿ ತಮ್ಮ ಆರೋಗ್ಯ ವಿಚಾರ ಕುರಿತ ಮಾಹಿತಿಗಳನ್ನು ಬಹಿರಂಗಪಡಿಸಬೇಕು. ನಾನೂ ಕೂಡ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ನಾನು ರಕ್ತದೊತ್ತಡದಿಂದ ಬಳಲುತ್ತಿದ್ದೇನೆ. 
ಇದಕ್ಕಾಗಿ ನಾನು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಆದರೆ, ಇದನ್ನೂ ಇಂದಿಗೂ ನಾನು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಇಂದು ಮಾಧ್ಯಮದವರು ಕೇಳಿದ ಕಾರಣಕ್ಕೆ ಹೇಳಿಕೊಂಡಿದ್ದೇನೆ. ಹಾಗೆಂದು ಪ್ರತೀ ಸಮಸ್ಯೆಯನ್ನು ನಾನು ಬಹಿರಂಗಪಡಿಸಬೇಕೆಂದಲ್ಲ. ನಾನು ಸಾರ್ವಜನಿಕರ ಜೀವನದಲ್ಲಿದ್ದೇನೆ. ಹೀಗಾಗಿ ಬಹಿರಂಗಪಡಿಸಬೇಕು. ಅಧಿಕಾರದಲ್ಲಿದ್ದ ವ್ಯಕ್ತಿ ಕೂಡ ಸಾರ್ವಜನಿಕರಿಗೆ ತಮ್ಮ ಕುರಿತು ಮಾಹಿತಿಗಳನ್ನು ನೀಡುತ್ತಿರಬೇಕು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

ತಮಿಳುನಾಡು ಸಿಎಂ ವಿಜಯ್-ಪ್ರಧಾನಿ ಮೋದಿ ಭೇಟಿ: ಎರಡು ದೊಡ್ಡ ಬೇಡಿಕೆ; ಇಲ್ಲಿದೆ ವಿವರ..

SCROLL FOR NEXT