ಭಾರತ-ಪಾಕ್ ಗಡಿಯಲ್ಲಿ 2015-17 ವರೆಗೆ ಅರೆಸೇನಾಪಡೆಯ 400 ಸಿಬ್ಬಂದಿಗಳ ಹತ್ಯೆ! 
ದೇಶ

ಭಾರತ-ಪಾಕ್ ಗಡಿಯಲ್ಲಿ 2015-17 ವರೆಗೆ ಅರೆಸೇನಾಪಡೆಯ 400 ಸಿಬ್ಬಂದಿಗಳ ಹತ್ಯೆ!

ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ 2015-17 ವರೆಗೆ ಗುಂಡೇಟಿಗೆ ಬಲಿಯಾದ ಅರೆಸೇನಾ ಪಡೆಗಳ ಸಂಖ್ಯೆ ಬರೊಬ್ಬರಿ 400 ನ್ನು ದಾಟಿದೆ.

ನವದೆಹಲಿ: ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ 2015-17 ವರೆಗೆ ಗುಂಡೇಟಿಗೆ ಬಲಿಯಾದ ಅರೆಸೇನಾ ಪಡೆಗಳ ಸಂಖ್ಯೆ ಬರೊಬ್ಬರಿ 400 ನ್ನು ದಾಟಿದೆ. 
ಹೌದು, ಕೇಂದ್ರ ಸರ್ಕಾರದ ಅಧಿಕಾರಿಗಳ ಮಾಹಿತಿಯ ಪ್ರಕಾರ ಭಯೋತ್ಪಾದಕ ದಾಳಿ ಹಾಗೂ ಒಳನುಸುಳುವಿಕೆಯಿಂದ ಉಂಟಾದ ಘರ್ಷಣೆಯಲ್ಲಿ ಅರೆಸೇನಾಪಡೆಯ 400 ಸಿಬ್ಬಂದಿಗಳು ಮೃತಪಟ್ಟಿದ್ದಾರೆ. 
ಕಾರ್ಯಾಚರಣೆಯಲ್ಲಿಅತಿ ಹೆಚ್ಚು ಸಂಖ್ಯೆಯಲ್ಲಿ ಮೃತಪಟ್ಟಿರುವುದು ಗಡಿ ಭದ್ರತಾ ಪಡೆಯ ಸಿಬ್ಬಂದಿಗಳಾಗಿದ್ದು,  2015-17 ರ ಅವಧಿಯಲ್ಲಿ ಸುಮಾರು 167 ಗಡಿ ಭದ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದು, ಈ ಪೈಕಿ ಬಹುತೇಕ ಸಿಬ್ಬಂದಿಗಳು  ಅತೀ ಸೂಕ್ಷ್ಮ ಪ್ರದೇಶದಲ್ಲಿನ ಕಾರ್ಯಾಚರಣೆ ವೇಳೆ ಜೀವಕಳೆದುಕೊಂಡಿದ್ದಾರೆ. 
ಇನ್ನು ಕಳೆದ ಮೂರು ವರ್ಷಗಳಲ್ಲಿ 103 ಸಿಬ್ಬಂದಿಗಳನ್ನು ಸಿಆರ್ ಪಿಎಫ್ ಕಳೆದುಕೊಂಡಿದ್ದು ಬಹುತೇಕ ಸಿಬ್ಬಂದಿಗಳು ನಕ್ಸಲರ ದಾಳಿಗೆ ಹಾಗೂ ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ. 2015 ರಲ್ಲಿ ಬಿಎಸ್ಎಫ್ ನ 62 ಸಿಬ್ಬಂದಿಗಳು 2016 ರಲ್ಲಿ 58 ಸಿಬ್ಬಂದಿಗಳು 2017 ರಲ್ಲಿ 47 ಸಿಬ್ಬಂದಿಗಳು ಜೀವತೆತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಳೆ ಬಳಿಕ ಸಿಲಿಕಾನ್ ಸಿಟಿ ಕೂಲ್-ಕೂಲ್: 10 ಡಿಗ್ರಿ ಸೆಲ್ಸಿಯಸ್ ತಾಪಮಾನ ಕುಸಿತ; ಮುಂದಿನ 2 ದಿನಗಳೂ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ..!

ಬೌರಿಂಗ್ ಆಸ್ಪತ್ರೆ ದುರಂತ: ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ಘೋಷಣೆ

IPL 2026: ರಿಕಲ್ಟನ್ ಶತಕ ವ್ಯರ್ಥ; ಮುಂಬೈ ನೀಡಿದ ಟಾರ್ಗೆಟ್ ಧೂಳಿಪಟ, ದಾಖಲೆಯ 249 ರನ್ ಬಾರಿಸಿದ ಗೆದ್ದ SRH!

ಬಾಂಗ್ಲಾದೇಶ ಸರ್ಕಾರ ದೊಡ್ಡ ತಪ್ಪು ಮಾಡಿದೆ... ಟಿ20 ವಿಶ್ವಕಪ್ ಬಗ್ಗೆ ಶಕೀಬ್ ಅಲ್ ಹಸನ್ 'ಸ್ಫೋಟಕ ಹೇಳಿಕೆ'!

IPL 2026: 'ಬ್ಯಾಟಲ್ಲಿ AI Chip ಇದೆ' ಎಂದ ಪಾಕಿಸ್ತಾನದ Nouman Niaz ಗೆ ಬಟ್ಟೆ ಸುತ್ತಿ ಹೊಡೆದ ವೈಭವ್ ಸೂರ್ಯವಂಶಿ

SCROLL FOR NEXT