ದೇಶ

ಅಮೃತಸರ ಸ್ಫೋಟ ಪ್ರಕರಣ: ದಾಳಿ ಹಿಂದೆ ಪಾಕ್ ಐಎಸ್ಐ ಸಂಚು, ಓರ್ವನ ಬಂಧನ

Manjula VN
ಚಂಡೀಗಢ: ಅಮೃತಸರ ನಿರಂಕಾರಿ ಮಂದಿರದ ಮೇಲೆ ನಡೆದ ಗ್ರೆನೇಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಕೈವಾಡವಿದೆ ಎಂದು ಹೇಳಲಾಗುತ್ತಿದ್ದು, ಪ್ರಕರಣ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ. 
ಅಮೃತಸರ ಸಮೀಪ ನಿರಂಕಾರಿ ಸಮುದಾಯದ ಕಾರ್ಯಕ್ರಮದ ವೇಳೆ ದಾಳಿ ನಡೆಸಿದ್ದ ಇಬ್ಬರು ವ್ಯಕ್ತಿಗಳ ಬೈಕಿ ಅಮೃತಸರದ ಧರಿವಾಲ್ ಗ್ರಾಮದ ನಿವಾಸಿ ಬಿಕ್ರಮ್ಜಿತ್ ಸಿಂಗ್ ಅಲಿಯಾಸ್ ಬಿಕ್ರಮ್ (26) ಎಂಬಾತನನ್ನು ಪೊಲೀಸರು ಲೊಹರ್ಕಾರ್ ಗ್ರಾಮದ ಬಳಿ ಬಂಧನಕ್ಕೊಳಪಡಿಸಿದ್ದಾರೆಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಹೇಳಿದ್ದಾರೆ. 
ಮತ್ತೊಬ್ಬ ಆರೋಪಿ ಅವತಾರ್ ಸಿಂಗ್ ಖಾಲ್ಸಾ (32) ತಲೆಮರೆಸಿಕೊಕಂಡಿದ್ದು, ಆತನಿಗಾಗಿ ಅಧಿಕಾರಿಗಳು ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಜೊತೆಗೆ ಅವತಾರ್ ಸಿಂಗ್'ನ ಫೋಟೋಗಳನ್ನು ಸಿಎಂ ನಿನ್ನೆ ಬಿಡುಗಡೆ ಮಾಡಿದ್ದಾರೆ. 
ಇದೇ ವೇಳೆ ಗ್ರೆನೇಡ್ ದಾಳಿಯಲ್ಲಿ ಪಾಕಿಸ್ತಾನದ ಐಎಸ್ಐ ಕೈವಾಡವಿದೆ ಎಂದು ಆರೋಪಿಸಿರುವ ಅಮರೀಂದರ್ ಸಿಂಗ್ ಅವರು, ದಾಳಿಗೆ ಬಳಸಿದ ಗ್ರೆನೇಡ್ ಪಾಕಿಸ್ತಾನದ ಸೇನಾ ಕಾರ್ಖಾನೆಯಲ್ಲಿ ಉತ್ಪಾದಿಸಿದ್ದು ಎಂದು ಹೇಳಿದ್ದಾರೆ. ಅಮೃತಸರದ ಹೊರವಲಯದಲ್ಲಿ ನಡೆದ ದಾಳಿಯಲ್ಲಿ ನಿರಂಕಾರಿ ಸಮುದಾಯದ ಮೂವರು ಸಾವನ್ನಪ್ಪಿದ್ದರು.
SCROLL FOR NEXT