ರಾಮ್ ಮಾಧವ್ 
ದೇಶ

ಓಮರ್ ಸವಾಲಿನ ನಂತರ ಪಾಕ್ ಲಿಂಕ್ ಹೇಳಿಕೆ ಹಿಂಪಡೆದ ರಾಮ್ ಮಾಧವ್

ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆ ಮಾಡುವಂತೆ ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳಿಗೆ ಪಾಕಿಸ್ತಾನದಿಂದ.....

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆ ಮಾಡುವಂತೆ ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳಿಗೆ ಪಾಕಿಸ್ತಾನದಿಂದ ನಿರ್ದೇಶನ ಬಂದಿದೆ ಎಂದಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುಖಂಡ ರಾಮ್ ಮಾಧವ್ ಅವರು ಈಗ ತಮ್ಮ ಹೇಳಿಕೆಯನ್ನು ಹಿಂಪಡೆಯುವುದಾಗಿ ಟ್ವೀಟ್ ಮಾಡಿದ್ದಾರೆ.
ಮಾಧವ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಓಮರ್ ಅಬ್ದುಲ್ಹಾ ಅವರು, ಪಾಕ್ ಲಿಂಕ್ ಆರೋಪವನ್ನು ಸಾಬೀತುಪಡಿಸುವಂತೆ ಬಿಜೆಪಿ ಮುಖಂಡನಿಗೆ ಸಾರ್ವಜನಿಕವಾಗಿಯೇ ಸವಾಲು ಹಾಕಿದ್ದರು.
ಓಮರ್ ಅಬ್ದುಲ್ಲಾ ಅವರು ಯಾವುದೇ ಬಾಹ್ಯ ಒತ್ತಡವನ್ನು ತಳ್ಳಿಹಾಕಿದ ಹಿನ್ನೆಲೆಯಲ್ಲಿ ನಾನು ನನ್ನ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ. ಆದರೆ ಎರಡೂ ಪಕ್ಷಗಳು ತಮ್ಮ ಪ್ರೀತಿಯನ್ನು ಸಾಬೀತುಪಡಿಸಲು ಮುಂದಿನ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಲಿವೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ ಇದು ರಾಜಕೀಯ ಹೇಳಿಕೆ, ವೈಯಕ್ತಿಕ ಹೇಳಿಕೆ ಅಲ್ಲ ಎಂದು ಮಾಧವ್ ಸ್ಪಷ್ಟಪಡಿಸಿದ್ದಾರೆ.
ಇಂದು ಬೆಳಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಮಾಧವ್ ಅವರು, ಕಾಂಗ್ರೆಸ್‌ ಜತೆ ಕೈಜೋಡಿಸಿ ಸರ್ಕಾರ ರಚಿಸುವಂತೆ ಪಿಡಿಪಿ ಮತ್ತು ಎನ್‌ಸಿ ಗೆ ಗಡಿಯಾಚೆಯಿಂದ  (ಪಾಕಿಸ್ಥಾನದಿಂದ) ಸೂಚನೆ ಬಂದಿದ್ದುದರಿಂದಲೇ ಆ ಪಕ್ಷಗಳು ಅಪವಿತ್ರ ಮೈತ್ರಿ ಮೂಲಕ ಜತೆಗೂಡಿ ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚಿಸುವುದಕ್ಕೆ ಮುಂದಾಗಿವೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: 48 ಗಂಟೆಗಳಲ್ಲಿ ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್‌ನಲ್ಲಿ ನರಕ ಸೃಷ್ಟಿಸುತ್ತೇವೆ; Trump ಕೊನೇಯ ಎಚ್ಚರಿಕೆ!

IPL 2026: ಅಹಮದಾಬಾದ್ ಮೈದಾನದಲ್ಲಿ RR ವಿರುದ್ಧ ಅತ್ಯಧಿಕ ರನ್ ಚೇಸ್‌ನಲ್ಲಿ ಕೊನೆಯ ಓವರ್‌ನಲ್ಲಿ ಸೋತ Gujarat Titans

ವಿದೇಶಗಳ Mk-84 ಗೆ ಪರ್ಯಾಯ, ಆತ್ಮನಿರ್ಭರತೆಗೆ ಉತ್ತೇಜನ: ದೇಶೀಯವಾಗಿ 1000-kg ವಾಯುಬಾಂಬ್‌ ತಯಾರಿಸಲಿರುವ ಭಾರತ!

ಮಾಗಡಿ Congress ಶಾಸಕ ಹೆಚ್​​.ಸಿ ಬಾಲಕೃಷ್ಣಗೆ ಕೋರ್ಟ್ ಶಾಕ್​​: ಜಾಮೀನು ರಹಿತ ವಾರೆಂಟ್ ಜಾರಿ

'ನೀವೇನು ಸುರಕ್ಷಿತ ಅಲ್ಲ': ಟ್ರಂಪ್ 48 ಗಂಟೆಗಳ ಕೊನೆ ಎಚ್ಚರಿಕೆ ಬೆನ್ನಲ್ಲೆ CIA Station ಗೆ ಡ್ರೋನ್ ನುಗ್ಗಿಸಿ ಇರಾನ್; 1 ನಿಮಿಷದ ಅಂತರದಲ್ಲಿ 2 ಸ್ಫೋಟ!

SCROLL FOR NEXT