ನವದೆಹಲಿ: 2019ರ ಲೋಕಸಭಾ ಚುನಾವಣೆ ವೇಳೆ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಬದಲಿಗೆ ಬ್ಯಾಲಟ್ ಪೇಪರ್ ಗಳನ್ನು ಬಳಕೆ ಮಾಡುವಂತೆ ಆಗ್ರಹಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ.
ಇವಿಎಂಗಳ ತಿರುಚುವಿಕೆ, ಹಾಗೂ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿರುವುದರಿಂದ ಅವುಗಳನ್ನು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಬಳಸಬಾರದು ಎಂಬ ನ್ಯಾಯ ಭೂಮಿ ಎನ್'ಜಿಒ ವಾದವನ್ನು ಹಿರಿಯ ನಾಯಮೂರ್ತಿ ರಂಜನ್ ಗೊಗೋಯ್ ನೇತೃತ್ತವದ ಪೀಠ ತಿರಸ್ಕರಿಸಿದೆ.
ಪ್ರತೀ ವ್ಯವಸ್ಥೆ ಹಾಗೂ ಯಂತ್ರಗಳಲ್ಲೂ ಬಳಕೆ ಹಾಗೂ ದುರ್ಬಳಕೆ ಎಂಬುದು ಇದ್ದೇ ಇರುತ್ತದೆ. ಪ್ರತೀಯೆಡೆಯಲ್ಲೂ ಸಂದೇಹಗಳು ಇದ್ದೇ ಇರುತ್ತವೆ ಎಂದಿರುವ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ.