ದೇಶ

2002 ಅಕ್ಷರಧಾಮ ದಾಳಿ: ಪ್ರಮುಖ ಆರೋಪಿ ಬಂಧನ

Raghavendra Adiga
ಅಹಮದಾಬಾದ್: 2002ರ ಅಕ್ಷರಧಾಮ ದೇವಸ್ಥಾನದ ಮೇಲಿನ ಭಯೋತ್ಪಾದನಾ ದಾಳಿ ಪ್ರಕರಣದ ಸಂಬಂಧ ಪ್ರಮುಖ ಆರೋಪಿಯನ್ನು ಪೋಲೀಸರು ಸೋಮವಾರ ಬಂಧಿಸಿದ್ದಾರೆ.
ಮಹಮ್ಮದ್ ಫಾರೂಕ್ ಶೇಖ್ ಎನ್ನುವಾತನನ್ನು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಅಪರಾಧ ದಳ (ಕ್ರೈಂ ಬ್ರಾಂಚ್) ಪೋಲೀಸರು ವಶಕ್ಕೆ ಪಡೆದಿದ್ದಾರೆ. ಈತ ಸೌದಿ ಅರೇಬಿಯಾದ ರಿಯಾದ್ ನಿಂದ ಅಹಮದಾಬಾದ್ ಗೆ ಬಂದಿಳಿಯುತ್ತಿದ್ದ ಹಾಕೆ ಬಂಧಿಸಲಾಗಿದೆ ಎಂದು ಪೊಲೀಸ್ ಕಮೀಶನರ್ ಭಗ್ರಿತ್ ಸಿನ್ಹ್ ಘೋಯಿಲ್ ಪಿಟಿಐಗೆ ತಿಳಿಸಿದ್ದಾರೆ.
ಇಬ್ಬರು ಶಸ್ತ್ರಧಾರಿಗಳು ಅಕ್ಷರಧಾಮ ದೇವಾಲಯದ ಮೇಲೆ  2002 ರ ಸೆಪ್ಟೆಂಬರ್ 24ರಂದು ದಾಳಿ ನಡೆಸಿದ್ದು ದಾಳಿಯಲ್ಲಿ 30 ಮಂದಿ ಸಾವನ್ನಪ್ಪಿದ್ದು ಎಂಟು ಜನ ಗಾಯಗೊಂಡಿದ್ದರು. ಗೋದ್ರಾ ದುರಂತ ಬಳಿಕ ನಡೆದ ಗಲಭೆ ನಡೆದ ವರ್ಷವೇ ಈ ದಾಳಿಯೂ ನಡೆದಿತ್ತು.
ದೇವಾಲಯದ ಮೇಲಿನ ದಾಳಿಗೆ ಶೇಖ್ ಹಣ ಸಂಚಯ ಮಾಡಿದ್ದ. ಆತ ದಾಳಿ ಬಳಿಕ 2002 ರಲ್ಲಿ ರಿಯಾದ್ ಗೆ ಪರಾರಿಯಾಗುವ ಮುನ್ನ ಜುಹಾಪುರ್ ನಲ್ಲಿ ವಾಸವಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
SCROLL FOR NEXT