ನವದೆಹಲಿ: ಮುಂಬೈ 26/11 ದಾಳಿ ನಡೆದು ಇಂದಿಗೆ 10 ವರ್ಷ. ಆದರೆ ಮುಂಬೈ ನಲ್ಲಿ ದಾಳಿ ನಡೆಸಿದ್ದ ತನ್ನ ನೆಲದ ಭಯೋತ್ಪಾದಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ಪಾಕಿಸ್ತಾನ ವಿಫಲವಾಗಿದೆ. ದಾಳಿ ನಡೆದು ಒಂದು ದಶಕವೇ ಕಳೆದರೂ ಕ್ರಮ ಕೈಗೊಳ್ಳುವುದರಲ್ಲಿ ವಿಫಲವಾಗಿರುವ ಪಾಕಿಸ್ತಾನದ ವಿರುದ್ಧ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ದಾಳಿ ನಡೆದು 10 ವರ್ಷಗಳೇ ಕಳೆದರೂ ದಾಳಿಗೆ ಕಾರಣವಾದ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದು ದುಃಖಕರ ವಿಚಾರ. ದಾಳಿಯಲ್ಲಿ ಜೀವ ಕಳೆದುಕೊಂಡ 15 ದೇಶಗಳ 166 ಸಂತ್ರಸ್ತರ ಕುಟುಂಬ ಸದಸ್ಯರುಗಳು ನ್ಯಾಯಕ್ಕಾಗಿ ಇಂದಿಗೂ ಎದುರು ನೋಡುತ್ತಿದ್ದಾರೆ. ಆದರೆ ದಾಳಿ ಮಾಡಿದವರ ವಿರುದ್ಧ ಪಾಕಿಸ್ತಾನ ಕೈಗೊಳ್ಳುವುದಕ್ಕೆ ವಿಫಲವಾಗಿದ್ದು, ದಾಳಿ ನಡೆಸಲು ಸಂಚು ರೂಪಿಸಿದವರು ಇಂದಿಗೂ ಪಾಕಿಸ್ತಾನದಲ್ಲಿ ನಿರ್ಭಯದಿಂದ ತಿರುಗುತ್ತಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
26/11 ದಾಳಿ ಪಾಕಿಸ್ತಾನದ ನೆಲದಿಂದಲೇ ಸಂಚು ರೂಪಿಸಿ ನಡೆಸಲಾಗಿದ್ದ ದಾಳಿಯಾಗಿದೆ. ವರ್ಷದ ಪ್ರಾರಂಭದಲ್ಲಿ 26/11 ರ ದಾಳಿಕೋರರು ಪಾಕಿಸ್ತಾನಕ್ಕೇ ಸೇರಿದವರೆಂದು ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪಾಕಿಸ್ತಾನ ದ್ವಂದ್ವ ನೀತಿಯನ್ನು ಕೈಬಿಡಬೇಕೆಂದು ಮತ್ತೊಮ್ಮೆ ಕರೆ ನೀಡುತ್ತೇವೆ ಎಂದು ಭಾರತದ ವಿದೇಶಾಂಗ ಇಲಾಖೆ ಹೇಳಿದೆ.