ದೇಶ

ಶಬರಿಮಲೆ ಪ್ರತಿಭಟನೆಯ ವೇದಿಕೆ ಅಲ್ಲ, ಇನ್ನಾವುದೇ ರೀತಿಯ ಪ್ರತಿಭಟನೆ ನಡೆಯಬಾರದು: ಕೇರಳ ಹೈಕೋರ್ಟ್

Srinivasamurthy VN
ತಿರುವನಂತಪುರ: ಶಬರಿಮಲೆ ಪ್ರತಿಭಟನೆಯ ವೇದಿಕೆ ಅಲ್ಲ, ಇನ್ನಾವುದೇ ರೀತಿಯ ಪ್ರತಿಭಟನೆ ನಡೆಯಬಾರದು ಎಂದು ಕೇರಳ ಹೈಕೋರ್ಟ್ ಕಿಡಿಕಾರಿದೆ.
ಶಬರಿಮಲೆ ದೇಗುಲಕ್ಕೆ 10ರಿಂದ 50ರೊಳಗಿನ ಮಹಿಳೆಯರ ಪ್ರವೇಶ ಕುರಿತಂತೆ ಗಲಭೆಗೆ ಸಾಕ್ಷಿಯಾಗಿತ್ತು. ಈ ಘಟನೆ ಹಿನ್ನಲೆಯಲ್ಲಿ ಇಂದು ನಡೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಜಿಲ್ಲಾಡಳಿತವನ್ನು ಕೇರಳ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಅಯ್ಯಪ್ಪ ದೇಗುಲ ಪ್ರತಿಭಟನೆಯ ತಾಣವಲ್ಲ ಎಂದು ಕಿಡಿಕಾರಿದೆ.
'ಅಯ್ಯಪ್ಪನ ದೇಗುಲ ಪ್ರತಿಭಟನೆಯ ತಾಣವಲ್ಲ. ಅಲ್ಲಿ ಇಂತಹ ಚಟುವಟಿಕೆಗಳು ನಡೆಯಬಾರದು ಎಂದು ಕೋರ್ಟ್ ಹೇಳಿದೆ. ಅಂತೆಯೇ ದೇಗುಲದ ಬಳಿ ಪೊಲೀಸರು ಹೇರಿರುವ ನಿರ್ಬಂಧದ ಬಗ್ಗೆಯೂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಮಂಡಲ-ಮಕರವಿಳಕ್ಕು ಹಬ್ಬದ ವೇಳೆ ನಿಗಾ ಇಡಲು ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಪಿ.ಆರ್​. ರಾಮನ್ ಹಾಗೂ ಸಿರಿ ಜಗನ್​, ಹಿರಿಯ ಐಪಿಎಸ್​ ಅಧಿಕಾರಿ ಎ. ಹೇಮಚಂದ್ರನ್​ ಅವರನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ನೀಳಕ್ಕಲ್​ ಹಾಗೂ ಸನ್ನಿಧಾನಂ ಬಸ್​ ಸಂಚಾರದ ಮೇಲೆ ಪೊಲೀಸರು ಹೇರಿರುವ ನಿರ್ಬಂಧಗಳನ್ನು ತೆಗೆದು ಹಾಕುವಂತೆಯೂ ಕೋರ್ಟ್ ಸೂಚಿಸಿದೆ.
SCROLL FOR NEXT