ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಉಚಿತ ವೈ-ಫೈ ಗಾಗಿ ಉಪಗ್ರಹ ಉಡಾವಣೆ!

ತಂತ್ರಜ್ಞಾನ ಕ್ಷೇತ್ರದಲ್ಲಿ ಸದಾ ಹೊಸ ಪ್ರಯೋಗ ಮಾಡುವ ಚೀನಾ ಈಗ ಉಚಿತವಾಗಿ ವಿಶ್ವಾದ್ಯಂತ ಉಚಿತ ವೈ-ಫೈ ಸೇವೆ ಒದಗಿಸುವ ಯೋಜನೆಗಾಗಿ ಉಪಗ್ರಹವನ್ನು ಉಡಾವಣೆ ಮಾಡಲು ಸಜ್ಜುಗೊಂಡಿದೆ.

Chinese company unveils first satellite for free WiFi
Srinivas Rao BV
Updated On : 29 Nov 2018, 9:59 am
ತಂತ್ರಜ್ಞಾನ ಕ್ಷೇತ್ರದಲ್ಲಿ ಸದಾ ಹೊಸ ಪ್ರಯೋಗ ಮಾಡುವ ಚೀನಾ ಈಗ ಉಚಿತವಾಗಿ ವಿಶ್ವಾದ್ಯಂತ ಉಚಿತ ವೈ-ಫೈ ಸೇವೆ ಒದಗಿಸುವ ಯೋಜನೆಗಾಗಿ ಉಪಗ್ರಹವನ್ನು ಉಡಾವಣೆ ಮಾಡಲು ಸಜ್ಜುಗೊಂಡಿದೆ. 
ಸಂವಹನ ಕ್ಷೇತ್ರದ ಖಾಸಗಿ ಸಂಸ್ಥೆಯೊಂದು ಉಪಗ್ರಹ ಉಡಾವಣೆ ಮಾಡುತ್ತಿದ್ದು, ಲಿಂಕ್ ಶ್ಯೂರ್ ನೆಟ್ವರ್ಕ್ ನ ಪ್ರಕಾರ  ಚೀನಾದ ವಾಯುವ್ಯ ಪ್ರಾಂತ್ಯದಲ್ಲಿ ಜಿಯುಕ್ವಾನ್ ಸ್ಯಾಟಲೈಟ್ ಲಾಂಚ್ ಸೆಂಟರ್ ನಿಂದ ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. 
ಮುಂದಿನ ವರ್ಷ ಉಪಗ್ರಹ ಉಡಾವಣೆಯಾಗಲಿದ್ದು, 2020 ರ ವೇಳೆಗೆ 10 ಉಪಗ್ರಹಗಳನ್ನು ಉಡಾವಣೆ ಮಾಡುವುದಕ್ಕೆ ಸಂಸ್ಥೆ ಯೋಜನೆ ಹೊಂದಿದೆ. ಈ ಉಪಗ್ರಹ ಉಡಾವಣೆಯಿಂದಾಗಿ ಮೊಬೈಲ್ ನೆಟ್ವರ್ಕ್ ಇಲ್ಲದೇ ಇರುವ ಪ್ರದೇಶಗಳಲ್ಲಿಯೂ ಉಪಗ್ರಹಗಳ ಸಹಾಯದಿಂದ ಇಂಟರ್ ನೆಟ್ ನ್ನು ಬಳಕೆ ಮಾಡಬಹುದಾಗಿದೆ ಎಂದು ಪೀಪಲ್ಸ್ ಡೈಲಿ ವರದಿ ಪ್ರಕಟಿಸಿದೆ.

Advertisement

Advertisement

ಈ ಯೋಜನೆಗಾಗಿ ಲಿಂಕ್ ಶ್ಯೂರ್ ಸಂಸ್ಥೆ 3 ಬಿಲಿಯನ್ ಯುವಾನ್ ನ್ನು ಹೂಡಿಕೆ ಮಾಡಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement