ಪ್ರಧಾನಿಯನ್ನು ಭೇಟಿ ಮಾಡಬೇಕೆ? ಹಾಗಾದರೆ ಕೇವಲ 5 ರೂಪಾಯಿ ಖರ್ಚು ಮಾಡಿ! 
ದೇಶ

ಪ್ರಧಾನಿಯನ್ನು ಭೇಟಿ ಮಾಡಬೇಕೆ? ಹಾಗಾದರೆ ಕೇವಲ 5 ರೂಪಾಯಿ ಖರ್ಚು ಮಾಡಿ!

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಬೇಕೆ? ಮನ್ ಕೀ ಬಾತ್ ನ್ನು ಖುದ್ದಾಗಿ ಪ್ರಧಾನಿ ಬಳಿ ಕುಳಿತು ಕೇಳಬೇಕೆ? ಹಾಗಾದರೆ 5 ರೂಪಾಯಿ ಖರ್ಚು ಮಾಡಿ ಸಾಕು! ಹೌದು ಬಿಜೆಪಿ ಇಂತಹದ್ದೊಂದು ವಿಶೇಷ ಸೌಲಭ್ಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಬೇಕೆ? ಮನ್ ಕೀ ಬಾತ್ ನ್ನು ಖುದ್ದಾಗಿ ಪ್ರಧಾನಿ ಬಳಿ ಕುಳಿತು ಕೇಳಬೇಕೆ? ಹಾಗಾದರೆ 5 ರೂಪಾಯಿ ಖರ್ಚು ಮಾಡಿ ಸಾಕು! ಹೌದು ಬಿಜೆಪಿ ಇಂತಹದ್ದೊಂದು ವಿಶೇಷ ಸೌಲಭ್ಯ ನೀಡುತ್ತಿದೆ. 
ಏನು ಕೇವಲ 5 ರೂಪಾಯಿಗಳಿಗೆ ಪ್ರಧಾನಿಯನ್ನು ಎಲ್ಲಾದರೂ ಭೇಟಿ ಮಾಡಲು ಸಾಧ್ಯವೇ ಎಂದು ಹುಬ್ಬೇರಿಸಬೇಡಿ, 5  ರೂಪಾಯಿಗಳಿಗೆ ಅದೃಷ್ಟವೂ ವರ್ಕ್ ಔಟ್ ಆದರೆ ಮಾತ್ರ ಪ್ರಧಾನಿಯನ್ನು ಭೇಟಿ ಮಾಡಬಹುದಾಗಿದೆ. ಬಿಜೆಪಿ 2019 ರ ಚುನಾವಣೆಗೂ ಮುನ್ನ ಪಕ್ಷದ ಖಜಾನೆ ತುಂಬಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯನ್ನು ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದೆ.  ಪಕ್ಷಕ್ಕೆ 5 ರೂಪಾಯಿಂದ ಮೊದಲುಗೊಂಡು 1,000 ರೂಪಾಯಿ ವರೆಗೆ ದೇಣಿಗೆ ನೀಡುವವರು ನರೇಂದ್ರ ಮೋದಿ ಆಪ್ ಮೂಲಕ ಪ್ರಧಾನಿ ಭೇಟಿಯ ಅದೃಷ್ಟ ಪರೀಕ್ಷೆ ಮಾಡಬಹುದಾಗಿದೆ. 
ದೇಣಿಗೆ ನೀಡುವವರಿಗೆ ರೆಫರಲ್ ಕೋಡ್ ನ್ನು ಕಳಿಸಲಾಗುತ್ತದೆ, ಆ ಕೋಡ್ ನ್ನು ಇತರರಿಗೆ ಎಸ್ಎಂಎಸ್ ಅಥವಾ ವಾಟ್ಸ್ ಆಪ್ ಮೂಲಕ ಕಳಿಸಬೇಕಾಗುತ್ತದೆ. ಹೀಗೆ ಕಳಿಸಿದ ರೆಫರಲ್ ಕೋಡ್ ನ್ನು 100 ಜನರು ಬಳಕೆ ಮಾಡಿ ಆ ನೂರು ಜನರು ದೇಣಿಗೆ ನೀಡಿದರೆ ಮೂಲತಃ ರೆಫರಲ್ ಕೋಡ್ ಕಳಿಸಿದ್ದ ವ್ಯಕ್ತಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಬಹುದಾಗಿದೆ. 
ಅವಕಾಶ ವಂಚಿತರಿಗೆ ಟಿ-ಶರ್ಟ್, ಕಾಫಿ ಮಗ್ ಗಳನ್ನು ಉಡುಗೊರೆಯಾಗಿ  ನೀಡಲಾಗುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ