ಖಲಿಸ್ತಾನ್ ನಾಯಕನೊಂದಿಗೆ ನವಜೋತ್ ಸಿಂಗ್ ಸಿಧು 
ದೇಶ

ಸಾವಿರಾರು ಜನ ಫೋಟೋ ಕ್ಲಿಕ್ ಮಾಡಿದ್ರು, ಅದರಲ್ಲಿ ಚಾವ್ಲಾ ಯಾರು ಗೊತ್ತಿಲ್ಲ: ಸಿಧು

ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದಲ್ಲಿ ಕರ್ತಾರ್ ​ಪುರ ಕಾರಿಡಾರ್​ ಯೋಜನೆ ಶಂಕುಸ್ಥಾಪನೆ....

ನವದೆಹಲಿ: ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದಲ್ಲಿ ಕರ್ತಾರ್ ​ಪುರ ಕಾರಿಡಾರ್​ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಖಾಲಿಸ್ತಾನ ಪರ ಹೋರಾಟಗಾರ ಗೋಪಾಲ್​ ಸಿಂಗ್​ ಚಾವ್ಲಾ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದು, ಇದೀಗ ಭಾರೀ ಟೀಕೆಗೆ ಕಾರಣವಾಗಿದೆ. 
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಿಧು ಅವರು, ನಾನು ಪಾಕಿಸ್ತಾನಕ್ಕೆ ತೆರಳಿದ್ದ ವೇಳೆ ಸಾಕಷ್ಟು ಪ್ರೀತಿ ತೋರಿಸಲಾಯಿತು. ಪ್ರತಿ ದಿನ ಸಾವಿರಾರು ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ. ಅದರಲ್ಲಿ ಚಾವ್ಲಾ ಯಾರು ಚೀಮಾ ಯಾರು ಅಂತ ಗೊತ್ತಿಲ್ಲ ಎಂದಿದ್ದಾರೆ.
ಚಾವ್ಲಾ ಜೊತೆಗಿನ ಸಿಧು ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅದನ್ನು ನೋಡಿದ ಪಂಜಾಬ್ ಪ್ರತಿಪಕ್ಷ ನಾಯಕರು ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗೋಪಾಲ್ ​ಸಿಂಗ್​ ಚಾವ್ಲಾ ಅವರು ಸಿಧು ಜೊತೆಗಿನ ಫೋಟೋವನ್ನು ತಮ್ಮ ಫೇಸ್​ಬುಕ್ ಪೇಜ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್​ ಕ್ವಮಾರ್​ ಜಾವೇದ್​ ಬಾಜ್ವಾ ಕೂಡ ಈ ಫೋಟೋದಲ್ಲಿ ಇರುವುದನ್ನು ಕಾಣಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ