ರೋಹಿಂಗ್ಯಾ ಜನರು 
ದೇಶ

2019 ಜನವರಿವರೆಗೆ ರೋಹಿಂಗ್ಯಾ ಪ್ರಕರಣದ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ರೋಹಿಂಗ್ಯಾ ವಲಸೆಗಾರರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಪ್ರಕಟಿಸಲು 2019ರ ಜನವರಿವರೆಗೂ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ.

ನವದೆಹಲಿ: ರೋಹಿಂಗ್ಯಾ ವಲಸೆಗಾರರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಪ್ರಕಟಿಸಲು 2019ರ ಜನವರಿವರೆಗೂ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್  ಮುಂದೂಡಿದೆ.

ಮಾಯಾನ್ಮಾರ್ ನಲ್ಲಿ ರೋಹಿಂಗ್ಯಾ ಸಮುದಾಯದ ವಿರುದ್ಧ ಹಿಂಸಾಚಾರ ಹೆಚ್ಚಾದ ಪರಿಣಾಮ ಸಹಸ್ರಾರು ಸಂಖ್ಯೆಯಲ್ಲಿ ರೋಹಿಂಗ್ಯಾ  ಜನರು  ಭಾರತ ಹಾಗೂ ಬಾಂಗ್ಲಾದೇಶಕ್ಕೆ ವಲಸೆ ಬಂದಿದ್ದರು. ಇಂತಹ ಸುಮಾರು 40 ಸಾವಿರ ನಿರಾಶ್ರಿತರು ಭಾರತದಲ್ಲಿ ನೆಲೆಸಿದ್ದಾರೆ.  ಈ ಪೈಕಿ 16  ಸಾವಿರ ಜನರನ್ನು ವಿಶ್ವಸಂಸ್ಥೆ ನಿರಾಶ್ರಿತ ಎಜೆನ್ಸಿ ನೋಂದಾಯಿಸಿದೆ.

ರೋಹಿಂಗ್ಯಾ ಜನರು ಉಗ್ರ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದು, ಇವರನ್ನು ಬಳಸಿಕೊಂಡು  ಐಎಸ್ ಐಸ್ ಉಗ್ರರು  ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಅವರನ್ನು ದೇಶದಿಂದ ಹೊರ ಕಳುಹಿಸುವುದಾಗಿ ಕೇಂದ್ರಸರ್ಕಾರ ಕಳೆದ ವರ್ಷ ಸುಪ್ರೀಂಕೋರ್ಟ್ ನಲ್ಲಿ ಹೇಳಿಕೆ ನೀಡಿತ್ತು.

 ಮಯಾನ್ಮಾರ್ ನಲ್ಲಿ ಹಿಂಸಾಚಾರ ಹೆಚ್ಚಾದ ಹಿನ್ನೆಲೆಯಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಭಾರತದಲ್ಲಿ ನೆಲೆಸಿರುವುದಾಗಿ ರೋಹಿಂಗ್ಯಾ ವಲಸೆಗಾರರಾದ ಮೊಹಮ್ಮದ್ ಸಲೀಮ್ ವುಲ್ಲಾ ಹಾಗೂ ಮೊಹ್ಮದ್ ಶಾಕಿರ್ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; ಎಲ್ಲರ ಮನಗೆದ್ದ US ಮ್ಯಾನೇಜರ್ ಪ್ರತಿಕ್ರಿಯೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT