ಗೌತಮ್ ನವಲಕ 
ದೇಶ

ಗೌತಮ್ ನವಲಕರನ್ನು ಗೃಹ ಬಂಧನದಿಂದ ಮುಕ್ತಿಗೊಳಿಸಿದ ದೆಹಲಿ ಹೈಕೋರ್ಟ್ !

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಐವರು ಸಾಮಾಜಿಕ ಹೋರಾಟಗಾರರ ಪೈಕಿ ಒಬ್ಬರಾಗಿದ್ದ ಗೌತಮ್ ನವಲಕ ಅವರನ್ನು ದೆಹಲಿ ಹೈಕೋರ್ಟ್ ಇಂದು ಗೃಹ ಬಂಧನದಿಂದ ಮುಕ್ತಿಗೊಳಿಸಿದೆ.

ನವದೆಹಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ  ಬಂಧನಕ್ಕೊಳಗಾಗಿದ್ದ ಐವರು ಸಾಮಾಜಿಕ ಹೋರಾಟಗಾರರ ಪೈಕಿ ಒಬ್ಬರಾಗಿದ್ದ ಗೌತಮ್ ನವಲಕ ಅವರನ್ನು ದೆಹಲಿ ಹೈಕೋರ್ಟ್ ಇಂದು ಗೃಹ ಬಂಧನದಿಂದ ಮುಕ್ತಿಗೊಳಿಸಿದೆ.

ಗೌತಮ್ ನವಲಂಕರಿಗೆ  ರಿಲೀಪ್ ನೀಡಿರುವ ಹೈಕೋರ್ಟ್, ಬಿಡುಗಡೆಗಾಗಿ  ನಾಲ್ಕು ವಾರಗಳಲ್ಲಿ ಸೂಕ್ತ ವೇದಿಕೆ  ಬಳಸಿಕೊಳ್ಳಲು ಸುಪ್ರೀಂಕೋರ್ಟ್ ಕಳೆದ ವಾರ ಸ್ವಾತಂತ್ರ್ಯ ನೀಡಿತ್ತು ಎಂದು ಹೇಳಿದೆ.

ವಿಚಾರಣಾ ನ್ಯಾಯಾಲಯದ ಟ್ರಾನ್ಸಿಟ್ ರಿಮಾಂಡ್ ಆದೇಶವನ್ನು  ಹೈಕೋರ್ಟ್ ವಜಾಗೊಳಿಸಿದ್ದು, ಈ ವಿಷಯ ಕುರಿತು ಸುಪ್ರೀಂಕೋರ್ಟ್ ಗೆ ಪ್ರಶ್ನಿಸುವುದಾಗಿ ನವಲಂಕ ಹೇಳಿದ್ದಾರೆ. ನವಲಕ ರ ಬಂಧನ ಅವಧಿಯನ್ನು 24 ಗಂಟೆಗಿಂತಲೂ ಹೆಚ್ಚಿನ ಅವಧಿಗೆ ವಿಸ್ತರಿಸಿದದ್ದು ಅಸಮರ್ಥನೀಯವಾದದ್ದು ಎಂದು ಹೈಕೋರ್ಟ್ ಹೇಳಿದೆ.

 ಆಗಸ್ಟ್ 28 ರಂದು ದೆಹಲಿಯಲ್ಲಿ ನವಲಕ ಅವರನ್ನು ಬಂಧಿಸಲಾಗಿತ್ತು. ಅದೇ ದಿನ ವಿವಿಧ ಕಡೆಗಳಲ್ಲಿ ಇತರ ನಾಲ್ವರು ಸಾಮಾಜಿಕ ಹೋರಾಟಗಾರರನ್ನು ಬಂಧಿಸಲಾಗಿತ್ತು.

ಐವರು ಸಾಮಾಜಿಕ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕೆಂಬ ಮನವಿಯನ್ನು ಸೆಪ್ಟೆಂಬರ್ 29 ರಂದು ತಿರಸ್ಕರಿಸಿದ ಸುಪ್ರೀಂಕೋರ್ಟ್, ರಾಜಕೀಯ ಸಿದ್ದಾಂತದ ವ್ಯತ್ಯಾಸದ ಕಾರಣ ಅಥವಾ ಅಸಮ್ಮತಿ ವ್ಯಕ್ತಪಡಿಸುವುದಕ್ಕಾಗಲೀ ಇವರನ್ನು ಬಂಧಿಸಿಲ್ಲ ಎಂದು ಹೇಳಿಕೆ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!