ಸಂಗ್ರಹ ಚಿತ್ರ 
ದೇಶ

ಕಾಶ್ಮೀರ: ಶಸ್ತ್ರಾಸ್ತ್ರಗಳೊಂದಿಗೆ ನಾಪತ್ತೆಯಾಗಿದ್ದ ಎಸ್ ಪಿಒ ಅಧಿಕಾರಿ ಹಿಜ್ಬುಲ್ ಉಗ್ರ ಸಂಘಟನೆ ಸೇರ್ಪಡೆ!

ಕಳೆದ ವಾರ ಶ್ರೀನಗರದ ಎಸ್ ಪಿಒ ಕಚೇರಿಯಿಂದಲೇ 8 ಎಕೆ 47 ಗನ್ ಗಳೊಂದಿಗೆ ನಾಪತ್ತೆಯಾಗಿದ್ದ ವಿಶೇಷ ಭದ್ರತಾ ಅಧಿಕಾರಿ ಕುಖ್ಯಾತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಗೆ ಸೇರ್ಪಡೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ಶ್ರೀನಗರ: ಕಳೆದ ವಾರ ಶ್ರೀನಗರದ ಎಸ್ ಪಿಒ ಕಚೇರಿಯಿಂದಲೇ 8 ಎಕೆ 47 ಗನ್ ಗಳೊಂದಿಗೆ ನಾಪತ್ತೆಯಾಗಿದ್ದ ವಿಶೇಷ ಭದ್ರತಾ ಅಧಿಕಾರಿ ಕುಖ್ಯಾತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಗೆ ಸೇರ್ಪಡೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಕಳೆದವಾರ ಎಕೆ 47 ಗನ್ ಗಳೊಂದಿಗೆ ನಾಪತ್ತೆಯಾಗಿದ್ದ ಎಸ್ ಪಿಒ ಅಧಿಕಾರಿ ಅದಿಲ್ ಬಷೀರ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದ್ದಾರೆ. ಅವರು ಹಿಜ್ಬುಲ್ ಉಗ್ರ ಸಂಘಟನೆ ಕಮಾಂಡರ್ ಜೀನತ್ ಉಲ್ ಇಸ್ಲಾಂ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂದು ಹೇಳಿದ್ದಾರೆ.
ಅಂತೆಯೇ ಶ್ರೀನಗರ ಎಸ್ ಪಿಒ ಕಚೇರಿಯಿಂದ ಬಷೀರ್ ಗನ್ ಗಳನ್ನು ಕದಿಯಲು ಓರ್ವ ಸ್ಥಳೀಯ ನೆರವು ನೀಡಿದ್ದು, ನೆರವು ನೀಡಿದ ವ್ಯಕ್ತಿಯನ್ನು ಗುರಿತಿಸಲಾಗಿದೆ. ಶೋಪಿಯಾನ್ ಜಿಲ್ಲೆಯ ಆ ನಿವಾಸಿಯ ವಿರುದ್ಧ ಈಗ ಪ್ರಕರಣ ದಾಖಲಾಸಲಾಗಿದೆ. ಶೀಘ್ರ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಕಳೆದ ಸೆಪ್ಟೆಂಬಕ್ 28ರಂದು ಶೋಪಿಯಾನ್ ನ ಜವಾಹರ್ ನಗರದಲ್ಲಿರುವ ಶಾಸಕ ಎಜಾಜ್ ಮೀರ್ ಅವರ ನಿವಾಸಕ್ಕೆ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್ ಪಿಒ ಅಧಿಕಾರಿ ಅದಿಲ್ ಬಷೀರ್ 8 ಎಕೆ 47 ಗನ್ ಗಳೊಂದಿಗೆ ಪರಾರಿಯಾಗಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಶ್ಮೀರ ಪೊಲೀಸರು ಮೀರ್ ನಿವಾಸದ 10ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ