ದೇಶ

ರಾಜ್ಯದ ಖಾಸಗಿ ವಿಶ್ವವಿದ್ಯಾನಿಲಯಗಳ ಅಕ್ರಮಗಳ ಕುರಿತು ತನಿಖೆಗೆ ಯುಜಿಸಿ ಆದೇಶ

Srinivas Rao BV
ಬೆಂಗಳೂರು: ತಾಂತ್ರಿಕ ಕೋರ್ಸ್ ಗಳನ್ನು ಹೊಂದಿರುವ ರಾಜ್ಯದ ಖಾಸಗಿ ವಿಶ್ವವಿದ್ಯಾನಿಲಯಗಳ ಅಕ್ರಮಗಳ ಕುರಿತು ಯುಜಿಸಿ ತನಿಖೆಗೆ ಆದೇಶಿಸಿದ್ದು, ಅಕ್ರಮಗಳು ನಡೆದಿರುವ ಸಂಸ್ಥೆಗಳ ಬಗ್ಗೆ ವರದಿ ಸಲ್ಲಿಸಲು ಸಮಿತಿ ರಚನೆ ಮಾಡಿದೆ. 
ಶೈಕ್ಷಣಿಕ ಹಾಗೂ ಆಡಳಿತಾತ್ಮಕ ವಿಚಾರಗಳಲ್ಲಿ ಕೆಲವಿ ಖಾಸಗಿ ವಿಶ್ವವಿದ್ಯಾನಿಲಯಗಳು ಯುಜಿಸಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವ ಬಗ್ಗೆ ಯುಜಿಸಿಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಯುಜಿಸಿ ಸಮಿತಿ ರಚನೆ ಮಾಡಿ ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡುವಂತೆ ಸೂಚನೆ ನೀಡಿದೆ.
"2003 ರ ರಾಜ್ಯ ಕಾಯ್ದೆಯ ಮೂಲಕ ಸ್ಥಾಪನೆಗೊಂಡಿರುವ ವಿಶ್ವವಿದ್ಯಾನಿಲಯಗಳಲ್ಲಿ ಕೆಲವು ವಿವಿಗಳು ಯುಜಿಸಿ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ದೂರು ಬಂದಿದೆ, ದೂರಿನ ಹಿನ್ನೆಲೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ವರದಿ ನೀಡುವಂತೆ ಸೂಚನೆ ನೀಡಲಾಗಿದೆ" ಎಂದು ಯುಜಿಸಿ ಹೇಳಿದೆ. 
ಯುಜಿಸಿಯ ಪ್ರಕಾರ, ತಾಂತ್ರಿಕ ಕೋರ್ಸ್ ಗಳನ್ನು ನೀಡುತ್ತಿರುವ ಕೆಲವು ಖಾಸಗಿ ವಿಶ್ವವಿದ್ಯಾನಿಲಯಗಳು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಯಿಂದ ಅನುಮೋದನೆ ಪಡೆದಿಲ್ಲ. ಅನುಮೋದನೆ, ಅನುಮತಿ ಪಡೆಯದೇ ಈ ಖಾಸಗಿ ವಿಶ್ವವಿದ್ಯಾನಿಲಯಗಳು ಸರಿಯಾದ ಮೂಲಸೌಕರ್ಯ ಹಾಗೂ ಶಿಕ್ಷಕ ಸಿಬ್ಬಂದಿ ಇಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸೆರಿಸಿಕೊಳ್ಳುತ್ತಿವೆ. ಈ ಬಗ್ಗೆ ತನಿಖೆ ನಡೆದು ಶೀಘ್ರವೇ ವರದಿ ಸಲ್ಲಿಕೆಯಾಗಲಿದೆ. 
SCROLL FOR NEXT