ದೇಶ

ಕ್ಸೀ, ಪುಟಿನ್, ಟ್ರಂಪ್ ಪೈಕಿ ಯಾರ ಮೇಲೆ ವಿಶ್ವದಲ್ಲಿದೆ ಹೆಚ್ಚಿನ ವಿಶ್ವಾಸ?: ಬಹಿರಂಗಪಡಿಸಿತು ಸಮೀಕ್ಷೆಯ ಫಲಿತಾಂಶ

Srinivas Rao BV
ವಾಷಿಂಗ್ ಟನ್: ಜಗತ್ತಿನ ದೊಡ್ಡಣ್ಣ ಅಮೆರಿಕ ಎಂಬುದು ಎಲ್ಲರಿಗೂ ತಿಳಿದೇ ಇದೆ. ಇದಕ್ಕೆ ಪರ್ಯಾಯವಾಗಿ ರಷ್ಯಾ ಮತ್ತೊಮ್ಮೆ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಬೇಕೆಂದು ಯತ್ನಿಸುತ್ತಿದ್ದರೆ ಇತ್ತ ಚೀನಾ ದಕ್ಷಿಣ ಏಷ್ಯಾಗೇ ನಂ.1 ಆಗಬೇಕೆಂದು ಹವಣಿಸುತ್ತಿದೆ. ಈ ಎಲ್ಲಾ ರಾಷ್ಟ್ರಗಳ ಪೈಕಿ ಯಾವ ರಾಷ್ಟ್ರದ ಅಧ್ಯಕ್ಷರ ಮೆಲೆ ಹೆಚ್ಚು ವಿಶ್ವಾಸವಿದೆ ಎಂಬುದನ್ನು ಸಮೀಕ್ಷೆಯೊಂದು ಈಗ ಬಹಿರಂಗಪಡಿಸಿದೆ. 
ಪ್ಯೂ ರಿಸರ್ಚ್ ಸೆಂಟರ್ ನಡೆಸಿರುವ ಅಂತಾರಾಷ್ಟ್ರೀಯ ಸಮೀಕ್ಷೆಯಲ್ಲಿ ಟ್ರಂಪ್ ಗಿಂತಲೂ  ಹೆಚ್ಚು ವಿಶ್ವಾಸ ಇರುವುದು ಕ್ಸೀ ಜಿಂಗ್ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮೇಲೆಯೇ ಎಂದು ಸಮೀಕ್ಷೆ ಫಲಿತಾಂಶ ಹೇಳಿದೆ. 
25 ರಾಷ್ಟ್ರಗಳಲ್ಲಿನ ಸಮೀಕ್ಷೆಯ ಫಲಿತಾಂಶದಲ್ಲಿ ಶೇ.27 ರಷ್ಟು ಜನ ಮಾತ್ರ ಟ್ರಂಪ್ ಮೇಲೆ ವಿಶ್ವಾಸ ಹೊಂದಿದ್ದಾರೆ ಎಂದು ತಿಳಿದುಬಂದಿದೆ.  ವಿಶ್ವದ ವಿಚಾರಗಳಿಗೆ ಸಂಬಂಧಿಸಿದಂತೆ ಶೇ.52 ರಷ್ಟು ಜನರು ಜರ್ಮನಿಯ ಚಾಲ್ಸಿಲರ್ ಏಂಜೆಲಾ ಮಾರ್ಕೆಲ್ ಅವರ ಮೇಲೆ ವಿಶ್ವಾಸ ಹೊಂದಿರುವುದಾಗಿ ಹೇಳಿದ್ದಾರೆ.  ಫ್ರಾನ್ಸ್ ಅಧ್ಯಕ್ಷರ ಪರ ಶೇ.46 ರಷ್ಟು ಮತಗಳು ಬಂದಿದ್ದು ಕ್ಸೀ ಜಿನ್ ಪಿಂಗ್ ಪರ ಶೇ.34, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪರ ಶೇ.30 ರಷ್ಟು ಮತಗಳು ಬಂದಿವೆ. 
SCROLL FOR NEXT