ದೇಶ

ಈಸ್ಟ್ ಆಫ್ರಿಕಾದಲ್ಲಿ ಶೇ.30 ರಷ್ಟು ಸಿಂಹಗಳ ನಾಶಕ್ಕೆ ಕಾರಣವಾದ ವೈರಸ್ ಗಿರ್ ಸಿಂಹಗಳ ಸಾವಿಗೂ ಕಾರಣ: ವರದಿ

Srinivas Rao BV
ನವದೆಹಲಿ: ಗುಜರಾತ್ ನಲ್ಲಿ ಸಿಂಹಗಳ ಸಾವಿಗೆ ಕಾರಣವಾಗಿರುವ ಅಂಶವನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಬಹಿರಂಗಪಡಿಸಿದ್ದು,  ಈಸ್ಟ್ ಆಫ್ರಿಕಾದಲ್ಲಿ ಶೇ.30 ರಷ್ಟು ಸಿಂಹಗಳ ನಾಶಕ್ಕೆ ಕಾರಣವಾಗಿದ್ದ ವೈರಾಣು ಗಿರ್ ಸಿಂಹಗಳ ಸಾವಿಗೂ ಕಾರಣ ಎಂದು ಹೇಳಿದೆ. 
ಸೆ.12 ರಿಂದ ಗುಜರಾತ್ ನ ಗಿರ್ ಅರಣ್ಯದಲ್ಲಿ ಸಿಂಹಗಳ ಸಾವು ಸಂಭವಿಸುತ್ತಿದ್ದು, ಈ ವರೆಗೂ 23 ಸಿಂಹಗಳು ಸಾವನ್ನಪ್ಪಿವೆ. ಸಿಡಿವಿ ಎಂಬ ವೈರಸ್ ಏಷಿಯಾಟಿಕ್ ಸಿಂಹಗಳು ಗಿರ್ ಕಾಡಿನಲ್ಲಿ ಸಾವನ್ನಪ್ಪುತ್ತಿರುವುದಕ್ಕೆ ಕಾರಣ ಎಂದು ಐಸಿಎಂಆರ್ ವರದಿ ನೀಡಿದ್ದು, ಉಳಿದಿರುವ ಸಿಂಹಗಳನ್ನು ಬೇರೆ ವನ್ಯಧಾಮಗಳಿಗೆ ಸ್ಥಳಾಂತರಿಸುವುದೂ ಸೇರಿದಂತೆ  ಕೇಂದ್ರ ಸರ್ಕಾರ ಸಿಂಹಗಳನ್ನು ರಕ್ಷಿಸುವುದಕ್ಕೆ ಶೀಘ್ರವೇ ಕೆಲವು ಕ್ರಮ ಕೈಗೊಳ್ಳಬೇಕೆಂದು ಹೇಳಿದೆ. 
SCROLL FOR NEXT