BJP remembers Lord Ram only before polls, says Samajwadi MP
ಲಖನೌ: ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ನಾಯಕ, ಸಂಸದ ಸುರೇಂದ್ರ ಸಿಂಗ್ ನಗರ್ ಬಿಜೆಪಿಗೆ ಚುನಾವಣೆ ಬಂದಾಗ ಮಾತ್ರ ರಾಮ ಮಂದಿರ ನೆನಪಾಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಜಕೀಯ ಪಕ್ಷಗಳು ರಾಮಮಂದಿರ ವಿಷಯವನ್ನು ಬಳಕೆ ಮಾಡಿಕೊಳ್ಳಲಿವೆ. ಅಧಿಕಾರಕ್ಕೆ ಬಂದರೆ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಬಿಜೆಪಿ ಭರವಸೆ ನೀಡಿತ್ತು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 4.5 ವರ್ಷಗಳು ಕಳೆದಿವೆ. ಆದರೆ ಈ ವರೆಗೂ ನೆನಪಿಲ್ಲದ ರಾಮಮಂದಿರ ವಿಷಯ ಚುನಾವಣೆ ಹತ್ತಿರವಾದಾಗ ನೆನಪಾಗಿದೆ ಎಂದು ಸುರೇಂದ್ರ ಸಿಂಗ್ ನಗರ್ ಹೇಳಿದ್ದಾರೆ. ಬಿಜೆಪಿ ಮತಗಳಿಸುವುದಕ್ಕಾಗಿ ರಾಮಮಂದಿರ ವಿಷಯವನ್ನು ಬಳಕೆ ಮಾಡಿಕೊಳ್ಳುತ್ತಿದೆಯಷ್ಟೇ ಎಂದು ಸುರೇಂದ್ರ ಸಿಂಗ್ ನಗರ್ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics