ಸಾಂದರ್ಭಿಕ ಚಿತ್ರ 
ದೇಶ

ಪೂರ್ಣ ಪ್ರಮಾಣದಲ್ಲಿ ಬಳಕೆಯಾಗದ ಸೆಸ್

ಶಿಕ್ಷಣ ಸೆಸ್, ಕೃಷಿ ಸೆಸ್, ಸ್ವಚ್ಛ ಭಾರತ ಸೆಸ್... ಹೀಗೆ ಜನರಿಂದ ಹತ್ತು ಹಲವು ಸೆಸ್ ಗಳನ್ನು ಸಂಗ್ರಹಿಸಿದ ಕೇಂದ್ರ ಸರ್ಕಾರ...

ನವದೆಹಲಿ: ಶಿಕ್ಷಣ ಸೆಸ್, ಕೃಷಿ ಸೆಸ್, ಸ್ವಚ್ಛ ಭಾರತ ಸೆಸ್... ಹೀಗೆ ಜನರಿಂದ ಹತ್ತು ಹಲವು ಸೆಸ್ ಗಳನ್ನು ಸಂಗ್ರಹಿಸಿದ ಕೇಂದ್ರ ಸರ್ಕಾರ, ಅದನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳದೆ ಹಾಗೆ ಉಳಿಸಿಕೊಂಡಿದೆ.
ಹಣಕಾಸು ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, 2016-17ನೇ ಸಾಲಿನಲ್ಲಿ ಒಟ್ಟು 1,78,594 ಕೋಟಿ ರುಪಾಯಿ ಸೆಸ್ ಸಂಗ್ರಹಿಸಲಾಗಿದ್ದು, ಈ ಪೈಕಿ 1,00,871 ಕೋಟಿ ರುಪಾಯಿ ಮಾತ್ರ ಬಳಕೆ ಮಾಡಿಕೊಳ್ಳಲಾಗಿದೆ.
ಸಿಎಜಿ ಸಹ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕಾಗಿ ಸಂಗ್ರಹಿಸಿದ ಸೆಸ್ ಅನ್ನು ಬಳಕೆ ಮಾಡದಿರುವುದನ್ನು ಹೈಲೈಟ್ ಮಾಡಿದೆ.
ಸೆಸ್ ಬಳಕೆಯಾಗದಿರುವುದಕ್ಕೆ ಸರ್ಕಾರ ಹಲವು ಕಾರಣಗಳನ್ನು ನೀಡಬಹುದು. ಆದರೆ ಜನರಿಂದ ಹೆಚ್ಚಿನ ಹಣ ಸಂಗ್ರಹಿಸಲು ಸರ್ಕಾರಕ್ಕೆ ಸೆಸ್ ಒಂದು ಸಾಧನವಾಗಿದ್ದು, ಅದು ಬಳಕೆಯಾಗದಿದ್ದರೆ ಜನರಿಗೆ ಅನಗತ್ಯ ಹೊರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದಾಯವನ್ನು ಹೆಚ್ಚಿಸಿಕೊಳ್ಳಲು ಇದು(ಸೆಸ್) ಒಂದು ವಿಧಾನವಾಗಿದೆ. ಸರ್ಕಾರ ಕೋಟ್ಯಾಧೀಶ ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ತೆರಿಗೆ ವಿನಾಯ್ತಿ ನೀಡುತ್ತದೆ. ಮತ್ತೊಂದು ಕಡೆ ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಸೆಸ್ ವಿಧಿಸುತ್ತದೆ. ಸರ್ಕಾರ ಬಡವರಿಂದ ಹಣ ಕಿತ್ತಿಕೊಂಡು ಶ್ರೀಮಂತರಿಗೆ ನೀಡುತ್ತಿದೆ. ಸರ್ಕಾರ ಸೆಸ್ ಹೆಸರಿನಲ್ಲಿ ಸಾಮಾನ್ಯ ಜನರನ್ನು ಹೀರುತ್ತಿದೆ ಕೃಷಿ ತಜ್ಞ ದೇವಿಂದ್ರ ಶರ್ಮಾ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

SCROLL FOR NEXT