ಶಿಲ್ಲಾಂಗ್: ರಫೇಲ್ ಯುದ್ಧ ವಿಮಾನ ಅತ್ಯುತ್ತಮ ಸಾಮರ್ಥ್ಯ ಹೊಂದಿರುವ ವಿಮಾನವಾಗಿದ್ದು, ಭಾರತೀಯ ವಾಯುಸೇನಾ ಪಡೆಗೆ 'ಗೇಮ್ ಚೇಂಜರ್' ಆಗಿದೆ ಎಂದು ವಾಯುಸೇನೆಯ ಉಪ ಮುಖ್ಯಸ್ಥರಾಗಿರುವ ಏರ್ ಮಾರ್ಷಲ್ ನಂಬಿಯಾರ್ ಅವರು ಭಾನುವಾರ ಹೇಳಿದ್ದಾರೆ.
ಪಶ್ಚಿಮ ಬಂಗಾಳವನ್ನು ಹೊರತಪಡಿಸಿ, ಭಾರತೀಯ ವಾಯುಸೇನಾ ಪಡೆಯ ಎಲ್ಲಾ ಪ್ರದೇಶದಲ್ಲಿರುವ ಘಟಗಳಿಗೂ ರಫೇಲ್ ವಿಮಾನ ಸೇರಿ ಅತ್ಯಾಧುನಿಕ ಸೌಲಭ್ಯಗಳು ದೊರಕಲಿವೆ ಎಂದು ಹೇಳಿದ್ದಾರೆ.
ರಫೇಲ್ ಅತ್ಯುತ್ತಮವಾದ ವಿಮಾನವಾಗಿದೆ. 2 ವಾರಗಳ ಹಿಂದ ಫ್ರಾನ್ಸ್ ನಲ್ಲಿ ರಫೇಲ್ ವಿಮಾನದಲ್ಲಿ ಹಾರಾಡುವ ಅವಕಾಶ ನನಗೆ ಸಿಕ್ಕಿತ್ತು. ಇದೊಂದು ಅತ್ಯುತ್ತಮವಾದ ವಿಮಾನವಾಗಿದ್ದು, ವಾಯುಸೇನಾ ಪಡೆಗೆ ಗೇಮ್'ಚೇಂಜರ್ ಆಗಿರಲಿದೆ. ರಫೇಲ್ ಅಸ್ತಿತ್ವತೆ ನಮಗೆ ಸಾಕಷ್ಟು ಬಲವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.