ದೇಶ

ಸಿಬಿಐ ವಿರುದ್ಧ ಜೆಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್ ತಾಯಿ ಅಸಮಾಧಾನ

Srinivas Rao BV
ನವದೆಹಲಿ: ಕಳೆದ 2 ವರ್ಷಗಳಿಂದ ನಾಪತ್ತೆಯಾಗಿರುವ ಜೆಎನ್ ಯು ವಿವಿ ವಿದ್ಯಾರ್ಥಿ ನಜೀಬ್ ಅಹ್ಮದ್ ತಾಯಿ ಸಿಬಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ನಾಪತ್ತೆ ಪ್ರಕರಣದಲ್ಲಿ ಸಿಬಿಐ ತನಿಖೆಯಲ್ಲಿ ಪಕ್ಷಪಾತದಿಂದ ಕೂಡಿದೆ ಎಂದು ನಜೀಬ್ ಅಹ್ಮದ್ ತಾಯಿ ಆರೋಪಿಸಿದ್ದಾರೆ. ಅಹ್ಮದ್ ನ ನಿಗೂಢ ನಾಪತ್ತೆ ಪ್ರಕರಣವನ್ನು ಮುಕ್ತಾಯಗೊಳಿಸುವುದಕ್ಕೆ ಸಿಬಿಐ ಗೆ ದೆಹಲಿ ಹೈಕೋರ್ಟ್ ಅನುಮತಿ ನೀಡಿತ್ತು. 
ರಾಜಕೀಯ ಕಾರಣಗಳಿಂದಾಗಿ ಪುತ್ರನ ನಿಗೂಢ ನಾಪತ್ತೆ ಪ್ರಕರಣದ ತನಿಖೆಯನ್ನು ಇತ್ಯರ್ಥಗೊಳಿಸದೇ ಮುಕ್ತಾಯಗೊಳಿಸಲಾಗುತ್ತಿದೆ ಎಂದು ಫಾತೀಮಾ ನಫೀಸ್ ಆರೋಪಿಸಿದ್ದರು. ಆದರೆ ಸಿಬಿಐ ಈ ಆರೋಪವನ್ನು ನಿರಾಕರಿಸಿದೆ. ಸಿಬಿಐ ನಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಫಾತೀಮಾ ನಫೀಜ್ ಹೇಳಿದ್ದಾರೆ. 
SCROLL FOR NEXT