ವಿಲ್ ಸ್ಮಿತ್ 
ದೇಶ

ಹಿಮಾಲಯದ ದೇವಾಲಯದಲ್ಲಿ ಪೂಜೆ ನೆರವೇರಿಸಿದ ಹಾಲಿವುಡ್ ನಟ ವಿಲ್ ಸ್ಮಿತ್!

ವಿದೇಶಿಗರು ಭಾರತದ ಆಚರಣೆಗಳಿಗೆ ಮಾರುಹೋಗುತ್ತಿರುವುದು ಇತ್ತೀಚಿನ ದಿನಗಳ ಟ್ರೆಂಡಿಂಗ್ ವಿಷಯ.

ಡೆಹ್ರಾಡೂನ್: ವಿದೇಶಿಗರು ಭಾರತದ ಆಚರಣೆಗಳಿಗೆ ಮಾರುಹೋಗುತ್ತಿರುವುದು ಇತ್ತೀಚಿನ ದಿನಗಳ ಟ್ರೆಂಡಿಂಗ್ ವಿಷಯ. ಕ್ರಿಕೆಟ್ ಆಟಗಾರರು, ಉದ್ಯಮಿಗಳು ಸೇರಿದಂತೆ ಅಂತಾರಾಷ್ಟ್ರೀಯ ಖ್ಯಾತ ನಾಮರು ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಈ ಬಾರಿ ಈ ಪಟ್ಟಿಗೆ ಸೇರಿಕೊಂಡಿರುವುದು ಹಾಲಿವುಡ್ ನ ನಟ ವಿಲ್ ಸ್ಮಿತ್.
ಭಾರತದಲ್ಲಿರುವ ದೇವಾಲಯಗಳತ್ತ ಆಕರ್ಷಿತರಾಗಿರುವ ವಿಲ್ ಸ್ಮಿತ್ ಜ್ಯೋತಿಷಿಯೊಬ್ಬರ ಸಲಹೆಯಂತೆ ನಿರ್ದಿಷ್ಟ ಗ್ರಹ ಸ್ಥಿತಿಗಳಿಂದ ಉಂಟಾಗುವ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಹರಿದ್ವಾರದಲ್ಲಿರುವ ಶಿವನ ಮಂದಿರದಲ್ಲಿ ಪೂಜೆ
ಮಾಡಿಸಿದ್ದಾರೆ. 
ಪ್ರದೀಪ್ ಮಿಶ್ರಪುರಿ ಎಂಬ ಜ್ಯೋತಿಷಿ ನೀಡಿರುವ ಮಾಹಿತಿಯ ಪ್ರಕಾರ ಶನಿ ಗ್ರಹದ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ವಿಲ್ ಸ್ಮಿತ್ ಶಿವನ ದೇವಾಲಯದಲ್ಲಿ ಪೂಜೆ ಮಾಡಿಸಿದ್ದಾರಂತೆ. 
"ವಿಲ್ ಸ್ಮಿತ್ ಅವರ ಜಾತಕವನ್ನು ಪರಿಶೀಲಿಸಿ ಅವರ ಜೀವನದಲ್ಲಿ ನಡೆದಿರುವ ಮುಖ್ಯ ಘಟನಾವಳಿಗಳನ್ನು ಹೇಳಿದೆ. ಭವಿಷ್ಯ ವಿಶ್ಲೇಷಣೆಯ ನಿಖರತೆಗೆ ಅಚ್ಚರಿಗೊಂಡ ವಿಲ್ ಸ್ಮಿತ್ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿರುವ ಸಲಹೆಯನ್ನು ಪರಿಗಣಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ" ಎಂದು ಪ್ರದೀಪ್ ಮಿಶ್ರಪುರಿ ಹೇಳಿದ್ದಾರೆ. 
ಇದೇ ವೇಳೆ ಗಂಗಾ ನದಿ ತೀರದಲ್ಲಿ ಗಂಗಾ ಆರತಿಯನ್ನೂ ಸಹ ವಿಲ್ ಸ್ಮಿತ್ ಸಲ್ಲಿಸಿದ್ದು, "ಭಾರತೀಯ ಆಧ್ಯಾತ್ಮ ಹಾಗೂ ಜ್ಯೋತಿಷ್ಯಕ್ಕೆ ಆಳವಾದ ನಂಟಿರುವುದು ನನಗೆ ಗೋಚರಿಸಿದೆ" ಎಂದು ಹೇಳಿದ್ದಾರೆ. ರುದ್ರಾಭಿಷೇಕ ಮಾಡುವುದಕ್ಕೂ ಮುನ್ನ ವಿಲ್ ಸ್ಮಿತ್ ಪ್ರತಿ ಪೂಜೆಯ ಅರ್ಥ ಹಾಗೂ ಮಹತ್ವ ತಿಳಿದುಕೊಂಡು ನಂತರ ಪೂಜೆ ಮಾಡಿದ್ದಾರೆ ಎಂದು ಜ್ಯೋತಿಷಿ ಹೇಳಿದ್ದಾರೆ.  ಹಾಲಿವುಡ್ ನ ಹಲವು ನಟರು ಪ್ರದೀಪ್ ಮಿಶ್ರ ಪುರಿಯನ್ನು ಸಂಪರ್ಕಪಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!