ದೇಶ

ನಾಗ್ಪುರ್: ಮಾರಣಾಂತಿಕ ಅಪಘಾತ ನೋಡಿ ಮಾನಸಿಕ ಕಿನ್ನತೆಗೊಳಗಾಗಿದ್ದ ಯುವಕ ಆತ್ಮಹತ್ಯೆ

ಅಪ್ರಾಪ್ತ ಬಾಲಕನನ್ನು ಬಲಿ ಪಡೆದ ಭೀಕರ ರಸ್ತೆ ಅಪಘಾತ ನೋಡಿ ಮಾನಸಿಕ ಕಿನ್ನತೆಗೊಳಗಾಗಿದ್ದ 18 ವರ್ಷದ....

ನಾಗ್ಪುರ್: ಅಪ್ರಾಪ್ತ ಬಾಲಕನನ್ನು ಬಲಿ ಪಡೆದ ಭೀಕರ ರಸ್ತೆ ಅಪಘಾತ ನೋಡಿ ಮಾನಸಿಕ ಕಿನ್ನತೆಗೊಳಗಾಗಿದ್ದ 18 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಾಗ್ಪುರ್ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಇಂಜಿನಿಯರಿಂಗ್ ಮಾಡುತ್ತಿದ್ದ ಸೌರಭ್ ನಾಗ್ಪುರಕರ್ ಎಂಬ ಯುವಕ ಕಳೆದ ಭಾನುವಾರ ತೀನ್ ನಾಲ್ ಚೌಕ್ ನಲ್ಲಿರುವ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೌರಭ್ ಒಂದು ತಿಂಗಳ ಹಿಂದೆ ಕಾಲೇಜ್ ಗೆ ಹೋಗುತ್ತಿದ್ದಾಗ ನಡೆದ ಭೀಕರ ರಸ್ತೆ ಅಪಘಾತಕ್ಕೆ ಸಾಕ್ಷಿಯಾಗಿದ್ದನು. ಈ ಅಪಘಾತದಲ್ಲಿ ಓರ್ವ ಅಪ್ರಾಪ್ತ ಬಾಲಕ ಮೃತಪಟ್ಟಿದ್ದನು.
ಆತ್ಮಹತ್ಯೆಗೂ ಮುನ್ನ ಸೌರಭ್ ಬರೆದಿರುವ ಪತ್ರದ ಪ್ರಕಾರ, ಈ ಮುಂಚೆ ಎರಡು ಸಣ್ಣ ಅಪಘಾತಕ್ಕೆ ಒಳಗಾಗಿದ್ದು, ಈ ಎಲ್ಲಾ ಘಟನೆಗಳು ಆತನ ಮನಸಿನ ಮೇಲೆ ಗಂಭೀರ ಪರಿಣಾಮ ಬೀರಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ತೆಹ್ಸಿಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

'BJPಯವನಾದ ಮಾತ್ರಕ್ಕೆ ಮಾಲೀಕರು ಉಚಿತವಾಗಿ ಮನೆ ನೀಡಲಾರರು'; ನಾನು 'leta' or 'beta' ವರ್ಗಕ್ಕೆ ಸೇರಿದವನಲ್ಲ: ಶೆಹಜಾದ್ ಪೂನಾವಾಲಾ

'ರಾಹುಲ್ ಗಾಂಧಿ' ಕಾರಣಕ್ಕೆ ₹40 ಲಕ್ಷ ಪ್ಯಾಕೇಜ್, ಹ್ಯಾಂಡ್‌ಸಮ್ ಹುಡುಗನನ್ನೇ ರಿಜೆಕ್ಟ್ ಮಾಡಿದ ಹುಡುಗಿ!

ಬಿಡದಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ಅಕ್ರಮ ಪತ್ತೆ; ₹4.91 ಕೋಟಿ ಮೌಲ್ಯದ ನಕಲಿ ಔಷಧಗಳನ್ನು ವಶಪಡಿಸಿಕೊಂಡ FDA!

ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ‘ಧುರಂಧರ್’ ನಟಿ? ಡೈಮಂಡ್ ರಿಂಗ್ ಪ್ರದರ್ಶಿಸಿದ ಆಯೇಷಾ; ಫೋಟೋ ವೈರಲ್