ಸಂಗ್ರಹ ಚಿತ್ರ 
ದೇಶ

ಪಂಜಾಬ್: ರಾವಣ ಪ್ರತಿಕೃತಿ ದಹನ ವೇಳೆ ಭಕ್ತರ ಮೇಲೆ ರೈಲು ಹರಿದು 50ಕ್ಕೂ ಹೆಚ್ಚು ಮಂದಿ ಸಾವು, ಭೀಕರ ವಿಡಿಯೋ!

ದಸರಾ ಹಬ್ಬದ ದಿನವೇ ಪಂಜಾಬ್ ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು ದುರಂತದಲ್ಲಿ 50ಕ್ಕೂ ಮಂದಿ ಸಾವನ್ನಪ್ಪಿದ್ದಾರೆ...

ಅಮೃತ್‌ಸರ್‌: ದಸರಾ ಹಬ್ಬದ ದಿನವೇ ಪಂಜಾಬ್ ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು ದುರಂತದಲ್ಲಿ 50ಕ್ಕೂ ಮಂದಿ ಸಾವನ್ನಪ್ಪಿದ್ದಾರೆ...
ಅಮೃತ್‌ಸರ್‌ದಲ್ಲಿ ದಸರಾ ಪ್ರಯುಕ್ತ ರಾವಣ ಪ್ರತಿಕೃತಿ ದಹನವನ್ನು ಮಾಡಲಾಗುತ್ತಿತ್ತು. ಇದನ್ನು ಕಾಣಲು ನೂರಾರು ಮಂದಿ ಸ್ಧಳದಲ್ಲಿ ಬೀಡುತ್ತಿದ್ದರು. ಇನ್ನು ಅನೇಕರು ರೈಲಿನ ಹಳಿ ಮೇಲೆ ನಿಂತಿದ್ದು ರೈಲು ಬಂದಿದ್ದು ಗಮನಿಸಲಿಲ್ಲ. ಈ ವೇಳೆ ರೈಲು ನಿಲ್ದಾಣದಲ್ಲಿ ನೆರೆದಿದ್ದವರ ಮೇಲೆ ರೈಲು ಹರಿದಿದ್ದು ಸದ್ಯ 50 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ದುರಂತದಲ್ಲಿ ಹಲವು ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ನೂರರ ಗಡಿ ದಾಟಬಹುದು. 
ರೈಲು ದುರಂತದ ವೇಳೆ ಘಟನಾ ಸ್ಥಳದಲ್ಲಿ 500 ರಿಂದ 700 ಮಂದಿ ಸೇರಿದ್ದರು. ರಾವಣ ಪ್ರತಿಕೃತಿ ದಹನದ ವೇಳೆ ಪಟಾಕಿಗಳನ್ನು ಸಿಡಿಸಲಾಗಿತ್ತು. ಇದರಿಂದ ಅಲ್ಲಿ ನೆರೆದಿದ್ದವರಿಗೆ ರೈಲು ಬಂದಿರುವುದು ಗೊತ್ತಾಗದೆ ಈ ದುರಂತ ಸಂಭವಿಸಿದೆ. 
ಇನ್ನು ರೈಲು ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ