ತಿರುವನಂತಪುರಂ: ಶಬರಿಮಲೆಗೆ ಯತ್ನಿಸಿದ ಮಹಿಳಾ ಹೋರಾಟಗಾರ್ತಿಗೆ ಕೇರಳದ ಎಡಸರ್ಕಾರ ಬೆಂಬಲಿಸುವ ಮೂಲಕ ಭಕ್ತಾಧಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ವಾಗ್ದಾಳಿ ನಡೆಸಿವೆ.
ಅಧಿಕೃತ ಸಮವಸ್ತ್ರ ಹಾಗೂ ಹೆಲ್ಮೆಟ್ ಧರಿಸಿದ ಪೊಲೀಸರ ಬಿಗಿ ಭದ್ರತೆಯಲ್ಲಿ ಮಹಿಳಾ ಹೋರಾಟಗಾರ್ತಿಯೊಬ್ಬರು ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದಾರೆ ಎಂದು ಉಭಯ ಪಕ್ಷಗಳು ಆರೋಪಿಸಿವೆ.
ಹೈದರಾಬಾದ್ ಮೂಲದ ಪತ್ರಕರ್ತೆ ಹಾಗೂ ಕೊಚ್ಚಿ ಮೂಲದ ಹೋರಾಟಗಾರ್ತಿಯೊಬ್ಬರು ಶಬರಿಮೆಲೆ ಪ್ರವೇಶಿಸಲು ಯತ್ನಿಸಿದ್ದು, ಪೊಲೀಸರ ಭದ್ರತೆಯಲ್ಲಿ ದೇಗುಲದ 18 ಮೆಟ್ಟಿಲುಗಳ ಸ್ವಲ್ಪ ದೂರ ತಲುಪಿದ್ದಾರೆ ಆದರೆ. ಭಕ್ತಾಧಿಗಳ ತೀವ್ರ ಪ್ರತಿಭಟನೆಯಿಂದ ನಂತರ ಅವರು ದರ್ಶನವಾಗದೆ ವಾಪಾಸ್ ಬಂದಿದ್ದಾರೆ.
ಈ ವಿಚಾರದಲ್ಲಿ ಎಲ್ ಡಿಎಫ್ ಸರ್ಕಾರದ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತಲಾ, ನಿಜವಾದ ಭಕ್ತಾಧಿಗಳಿಗೆ ಪೊಲೀಸರು ಭದ್ರತೆ ನೀಡಿದ್ದಾರೆಯೇ ಕಮಾಂಡೋ ಕಾರ್ಯಾಚರಣೆಯಲ್ಲಿ ಮಹಿಳೆ ದೇವಾಲಯ ಪ್ರವೇಶಿಸುವುದೇ? ಇದು ಸರ್ವೋಚ್ಚ ನ್ಯಾಯಾಲಯದ ಆದೇಶವೇ? "ಎಂದು ಪ್ರಶ್ನಿಸಿದ್ದಾರೆ.
ಶಬರಿಮಲೆಯನ್ನು ಸಂಘರ್ಷಣೆಯ ಕೇಂದ್ರವಾಗಿ ರೂಪಿಸಲು ಕೇರಳ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಪಿ. ಎಸ್, ಶ್ರೀಧರನ್ ಪಿಲ್ಲಯ್ ಆರೋಪಿಸಿದ್ದಾರೆ.