ನಾವು ಕಾನೂನು ಪಾಲನೆ ಮಾಡುತ್ತಿದ್ದೇವೆ, ಅಹಿತಕರ ವಾತಾವರಣವನ್ನು ಸೃಷ್ಟಿ ಮಾಡುತ್ತಿಲ್ಲ: ಕೇರಳ ಪೊಲೀಸ್ 
ದೇಶ

ಕಾನೂನಷ್ಟೇ ಪಾಲನೆ ಮಾಡುತ್ತಿದ್ದೇವೆ, ಅಹಿತಕರ ವಾತಾವರಣ ಸೃಷ್ಟಿ ಮಾಡುವುದಿಲ್ಲ: ಕೇರಳ ಪೊಲೀಸ್

ಶಬರಿಮಲೆಯಲ್ಲಿ ಪೊಲೀಸರು ಅಹಿತಕರ ವಾತಾವರಣ ಸೃಷ್ಟಿ ಮಾಡುವುದಿಲ್ಲ. ಭಕ್ತಾದಿಗಳೊಂದಿಗೆ ಘರ್ಷಣೆಯುಂಟಾಗುವುದು ನಮಗಿಷ್ಟವಿಲ್ಲ. ನಾವು ಕಾನೂನಷ್ಟೇ ಪಾಲನೆ ಮಾಡುತ್ತಿದ್ದೇವೆಂದು ಕೇರಳ ಪೊಲೀಸರು ಶುಕ್ರವಾರ ಹೇಳಿದ್ದಾರೆ...

ತಿರುವನಂತಪುರ: ಶಬರಿಮಲೆಯಲ್ಲಿ ಪೊಲೀಸರು ಅಹಿತಕರ ವಾತಾವರಣ ಸೃಷ್ಟಿ ಮಾಡುವುದಿಲ್ಲ. ಭಕ್ತಾದಿಗಳೊಂದಿಗೆ ಘರ್ಷಣೆಯುಂಟಾಗುವುದು ನಮಗಿಷ್ಟವಿಲ್ಲ. ನಾವು ಕಾನೂನಷ್ಟೇ ಪಾಲನೆ ಮಾಡುತ್ತಿದ್ದೇವೆಂದು ಕೇರಳ ಪೊಲೀಸರು ಶುಕ್ರವಾರ ಹೇಳಿದ್ದಾರೆ. 
ಶಬರಿಮಲೆಯಲ್ಲಿ ಹಿಂಸಾಚಾರ ಹೆಚ್ಚಾಗಿರುವ ಹಿನ್ನಲೆಯಲ್ಲಿ ಭಕ್ತಾದಿಗಳೊಂದಿಗೆ ಮಾತುಕತೆ ನಡೆಸಿರುವ ಕೇರಳ ಐಜಿ ಎಸ್.ಶ್ರೀಜಿತ್ ಅವರು, ಶಬರಿಮಲೆಯಲ್ಲಿ ಪೊಲೀಸರು ಅಹಿತಕರ ವಾತಾವರಣ ಸೃಷ್ಟಿ ಮಾಡುವುದಿಲ್ಲ. ಭಕ್ತಾದಿಗಳೊಂದಿಗೆ ಘರ್ಷಣೆಯುಂಟಾಗುವುದು ನಮಗಿಷ್ಟವಿಲ್ಲ. ನಾವು ಕಾನೂನಷ್ಟೇ ಪಾಲನೆ ಮಾಡುತ್ತಿದ್ದೇವೆ. ಮಹಿಳೆಯರ ಪ್ರವೇಶ ಕುರಿತು ಉನ್ನತಾಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಸ್ಥಳದ ಪರಿಸ್ಥಿತಿ ಕುರಿತಂತೆ ಅವರಿಗೆ ವಿವರಣೆ ನೀಡುತ್ತಿದ್ದೇವೆಂದು ಹೇಳಿದ್ದಾರೆ. 
ಈ ನಡುವೆ ತೀವ್ರ ಪ್ರತಿಭಟನೆಗಳ ನಡುವೆಯೂ ಇಂದು ಓರ್ವ ಪತ್ರಕರ್ತೆ ಹಾಗೂ ಮತ್ತೋರ್ವ ಮಹಿಳೆ ಭಾರೀ ಭದ್ರತೆಯೊಂದಿಗೆ ಅಯ್ಯಪ್ಪನ ಸನ್ನಿಧಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. 
ಬುಲೆಟ್ ಫ್ರೂಫ್ ಚಾಕೆಟ್ ಹಾಗೂ ಹೆಲ್ಮೆಟ್ ಧರಿಸಿರುವ ಮಹಿಳೆಯರು ಪೊಲೀಸರ ಸರ್ಪಗಾವಲೊಂದಿಗೆ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದಾರೆ. 
ದೇಶದ ಸರ್ವೋನ್ನತ ನ್ಯಾಯಾಲಯವು 10ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡಿತ್ತು. ಇದರಂತೆ ಸುಪ್ರೀಂಕೋರ್ಟ್ ಆದೇಶದ ಬಳಿಕ ಬುಧವಾರವಷ್ಟೇ ದೇಗುಲದ ಬಾಗಿಲನ್ನು ತೆರೆಯಲಾಗಿತ್ತು. ಆದರೆ, ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT