ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪೊಲೀಸ್ ಭದ್ರತೆಯಲ್ಲಿ ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಮುಂದಾದ ಕಾರ್ಯಕರ್ತೆ ಎಸ್ ಪಿ ಮಂಜು

ಕೇರಳ ದಲಿತ ಮಹಿಳಾ ಒಕ್ಕೂಟದ ಅಧ್ಯಕ್ಷೆ ಎಸ್ ಪಿ ಮಂಜು(38) ಅವರು ಪೊಲೀಸ್ ಭದ್ರತೆಯಲ್ಲಿ ಶಬರಿಮಲೆ....

ಶಬರಿಮಲೆ
Lingaraj Badiger
Updated On : 20 Oct 2018, 8:57 am
ತಿರುವನಂತಪುರಂ: ಕೇರಳ ದಲಿತ ಮಹಿಳಾ ಒಕ್ಕೂಟದ ಅಧ್ಯಕ್ಷೆ ಎಸ್ ಪಿ ಮಂಜು(38) ಅವರು ಪೊಲೀಸ್ ಭದ್ರತೆಯಲ್ಲಿ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಮುಂದಾಗಿದ್ದಾರೆ.
ಈಗಾಗಲೇ ಪಂಪಾದಲ್ಲಿರುವ ಮಂಜು ಅವರು, ಪಂಪಾ ಪೊಲೀಸ್ ಠಾಣೆಗೆ ತೆರಳಿ ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ತನಗೆ ಸೂಕ್ತ ಭದ್ರತೆ ಒದಗಿಸುವಂತೆ ಕೋರಿದ್ದಾರೆ. 
ಮಂಜು ಮನವಿಗೆ ಸ್ಪಂದಿಸಿದ ಪೊಲೀಸರು, ಅವರಿಗೆ 100 ಪೊಲೀಸರ ಭದ್ರತೆ ಒದಗಿಸಲು ನಿರ್ಧರಿಸಿದ್ದಾರೆ.

Advertisement

Advertisement

ಕೊಲ್ಲಂ ಜಿಲ್ಲೆಯ ಮಂಜು ಅವರು ಸಾಂಪ್ರದಾಯಿಕ ಉಡುಪು ಧರಿಸಿ, ಇರುಮುಡಿಯೊಂದಿಗೆ ಇಂದು ಮಧ್ಯಾಹ್ನ ಅಯ್ಯಪ್ಪಸ್ವಾಮಿ ದರ್ಶನ ಪಡೆಯುತ್ತಿದ್ದಾರೆ.
ಸುಪ್ರೀಂ ಕೋರ್ಟ್ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಬರಿಮೇಲೆ ದೇವಸ್ಥಾನ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಿದ ನಂತರ, ದೇವಸ್ಥಾನ ಪ್ರವೇಶಿಸಲು ಯತ್ನಿಸುತ್ತಿರುವ ಐದನೇ ಮಹಿಳೆ ಮಂಜು ಆಗಿದ್ದಾರೆ. ಈ ಮುಂಚೆ ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತೆ ಸುಹಾಸಿನಿ ರಾಜ್, ಮೋಜೋ ಟಿವಿಯ ಕೋಕಿಲಾ ಜಾಕಲ್, ಸಾಮಾಜಿಕ ಕಾರ್ಯಕರ್ತೆಯರಾದ ರೆಹನಾ ಫಾತಿಮಾ ಹಾಗೂ ಮೇರಿ ಸ್ವೀಟಿ ಅವರು ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement