ದೇಶ

ಉತ್ತರ ಪ್ರದೇಶ: 'ಕೋತಿ ಚೇಷ್ಟೆ'ಯಿಂದ ವ್ಯಕ್ತಿ ಸಾವು, ಆರೋಪಿ ಮಂಗಗಳ ವಿರುದ್ಧ ಎಫ್ಐಆರ್ ದಾಖಲಿಸಲು ಆಗ್ರಹ!

Raghavendra Adiga
ಭಗ್ಪತ್(ಉತ್ತರ ಪ್ರದೇಶ): ಮಂಗಗಳು ಕಲ್ಲೆಸೆದ ಕಾರಣ 70 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿದ್ದು ಇದೀಗ "ಆರೋಪಿ" ಮಂಗಗಳ ವಿರುದ್ಧ ಎಫ್ಐಆರ್  ದಾಖಲಿಸಬೇಕೆಂದು ಮೃತರ ಕುಟುಂಬ ಒತ್ತಾಯಿಸಿದೆ.
ಅಕ್ಟೋಬರ್ 17 ರಂದು ಭಗ್ಪತ್ ಜಿಲ್ಲೆ ಟಿಕ್ರಿ ಗ್ರಾಮದಲ್ಲಿ ಸಂಭವಿಸಿದ ಘಟನೆಯಲ್ಲಿ ಕೆಲ ಪುಂಡ ಕೋತಿಗಳು ಧರಂಪಾಲ್ ಎನ್ನುವವರ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ವೃದ್ದನು ಇಟ್ಟಿಗೆಗಳ ರಾಶಿಯ ಬಳಿ ಮಲಗಿದ್ದರು. ಆಗ ಕೆಲ ಕೋತಿಗಳು ಆ ಇಟ್ಟಿಗೆ ಮೇಲೆ ಜಿಗಿದಿದ್ದಾವೆ. ಆಗ ಇಟ್ಟಿಗೆ ಮಲಗಿದ್ದ ವೃದ್ದರ ಮೇಲೆ ಬಿದ್ದು ಅವರು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಸರ್ಕಲ್ ಇನ್ಸ್ ಪೆಕ್ಟರ್ ರಾಮಲಾ ರಾಜೀವ್ ಪ್ರತಾಪ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ಇಟ್ಟಿಗೆಗಳ ರಾಶಿಯು ಕುಸಿದು ಧರ್ಂಪಾಲ್ ಮೇಲೆ ಬಿದ್ದಿದ್ದು ಅವರನ್ನು ತಕ್ಷಣ ಜ್ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಆದರೆ ಮೃತ ಧರಂಪಾಲ್ ಸೋದರ ಕೃಷ್ಣಪಾಲ್ ಸಿಂಗ್ ಹೇಳುವಂತೆ ಧರಂಪಾಲ್ ಪೂಜೆಗಾಗಿ ಕಟ್ಟಿಗೆ ಸಂಗ್ರಹಿಸಲು ಹೋದಾಗ ಕೋತಿಗಳು ಅವರ ಕಡೆಗೆ ಗುರಿಯಿತ್ಟು ಇಟ್ಟಿಗೆಯಿಂದ ಹೊಡೆದಿವೆ. ಪದೇ ಪದೇ ಹೊಡೆತ ತಿಂದು ತಲೆಗೆ ತೀವ್ರ ಗಾಯವಾಗಿದ್ದು ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನಿಡಿದ್ದಾರೆ. ಇಟ್ಟಿಗೆ ಹೊಡೆತದಿಂದಾಗಿ ಧರಂಪಾಲ್ ತಲೆ ಹಾಗೂ ಎದೆ ಭಾಗಗಳಿಗೆ ಗಾಯವಾಗಿದೆ.
''ಕೋತಿಗಳು ಧರ್ಮಪಾಲ್‌ ಮೇಲೆ 20ಕ್ಕೂ ಹೆಚ್ಚು ಇಟ್ಟಿಗೆಗಳನ್ನು ಎಸದಿವೆ. ನಾವು ಕೋತಿಗಳ ವಿರುದ್ಧ ಲಿಖಿತ ದೂರನ್ನು ಸಲ್ಲಿಸಿದ್ದೇವೆ, ಆದರೆ ಪೊಲೀಸರು ಮಾತ್ರ ಇದು ಆಕಸ್ಮಿಕ ಘಟನೆ ಎನ್ನುತಿದ್ದಾರೆ" ಕೃಷ್ಣಪಾಲ್ ಸಿಂಗ್ ಹೇಳಿದ್ದಾರೆ.
ಸಧ್ಯ ಅವರು ಹಿರಿಯ ಪೋಲೀಸ್ ಅಧಿಕಾರಿಗಳನ್ನು ಭೇಟಿಯಾಗಲಿದ್ದು ಈ, ಕುರಿತು ಕ್ರಮಕ್ಕೆ ಆಗ್ರಹಿಸಲಿದ್ದಾರೆ.
SCROLL FOR NEXT