ದೇಶ

ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ ವಿರುದ್ಧ ಅತ್ಯಾಚಾರ ಆರೋಪ: ಎಫ್ಐಆರ್ ದಾಖಲು!

Raghavendra Adiga
ತಿರುವನಂತಪುರ: ಸೋಲಾರ್ ಫಲಕ ಅಳವಡಿಕೆಯಲ್ಲಿ ಬಹುಖೋಟಿ ಹಗರಣ ನಡೆಸಿ ಆರೋಪಿಯಾಗಿರುವ ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ  ವಿರುದ್ಧ ಅತ್ಯಾಚಾರ ಆರೋಪದಲ್ಡಿ ಎಫ್ಐಆರ್ ದಾಖಲಾಗಿದೆ.
ಕೇರಳ ಕ್ರೈಂ ಬ್ರ್ಯಾಂಚ್ ಪೋಲೀಸರು ಚಾಂಡಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.ಸೋಲಾರ್ ಹಗರಣದ ಪ್ರಮುಖ ಆರೋಪಿಗಳಾದ ಸರಿತಾ ನಾಯರ್ ಅವರ ಮೇಲೆ ಚಾಂಡಿ ಅತ್ಯಾಚಾರ ನಡೆಸಿದ್ದಾರೆ. ಸಿಎಂ ಅಧಿಕೃತ ನಿವಾಸ "ಕ್ಲಿಫ್ ಹೌಸ್" ನಲ್ಲಿ ಅತ್ಯಾಚಾರವೆಸಗಲಾಗಿದೆ ಎಂದು ಆರೋಪಿಸಿದ ಪೋಲೀಸರು ಶನಿವಾರ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಎಫ್ಐಆರ್ ಪ್ರತಿ ಸಲ್ಲಿಸಿದ್ದಾರೆ.
ಸೋಲಾರ್ ಫಲಕ ಅಳವಡಿಕೆ ಸಂಬಂಧ ಖಾಸಗಿ ಸಮ್ಸ್ಥೆಯೊಡನೆ ಹೂಡಿಕೆಗಾಗಿ ಮಾತುಕತೆಗೆ ತೆರಳಿದ್ದಾಗ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ಪ್ರತಿಯಾಗಿ ಚಾಂಡಿಯವರು ತನ್ನನ್ನು ಅವರ ಕೋಣೆಗೆ ಆಹ್ವಾನಿಸಿದ್ದರು ಎಂದು ಸರಿತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 2013ರಲ್ಲಿ ಹೀಗೆ ಅತ್ಯಾಚಾರ ನಡೆದಿದೆ.
ಸೋಲಾರ್ ಹಗರಣ ಪರವಾಗಿ ಸರಿತಾ ನಾಯರ್ ಅಂದಿನ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ  ಹಾಗೂ ಸಚಿವರುಗಳಿಗೆ ೧.೯೦ ಕೋಟಿ ರು. ಲಂಚ ನೀಡಿದ್ದಾಗಿ ನ್ಯಾಯಾಂಗ ಸಮಿಯ್ತಿ ಮುಂದೆ ಹೇಳಿಕೆ  ನೀಡಿದ್ದಾರೆ.
ಹಗರಣದ ಇನೋರ್ವ ಪ್ರಮುಖ ಆರೋಪಿಯಾಗಿದ್ದ ಬಿಜು ರಾಧಾಕೃಷ್ಣನ್ ಸಹ ಈ ಹಿಂದೆ ಚಾಂಡಿ ತಮಗೆ ಸೆಕ್ಸ್ ಆಫರ್ ನಿಡಿದ್ದರೆಂದು ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಸೋಲಾರ್ ಹಗರಣದಲ್ಲಿ ಮುಖ ಆರೋಪಿಗಳಾದ ಬಿಜು ರಾಧಾಕೃಷ್ಣನ್ ಹಾಗೂ ಸರಿತಾ ಎಸ್ ನಾಯರ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ  ಘೋಷಿಸಲ್ಪಟ್ಟಿದೆ
SCROLL FOR NEXT