ಸಾಂದರ್ಭಿಕ ಚಿತ್ರ 
ದೇಶ

ಶಬರಿಮಲೆ ವಿವಾದ :ಇಬ್ಬರು ಮಹಿಳಾ ಭಕ್ತಾಧಿಗಳ ಬಂಧನ, ಟಿಡಿಬಿ, ಮತ್ತು ಸರ್ಕಾರದಿಂದ ಪರಿಸ್ಥಿತಿ ಪರಮಾರ್ಶೆ

ಆಂಧ್ರ ಪ್ರದೇಶದ ಗುಂಟೂರಿನಿಂದ ಪುರುಷ ಭಕ್ತಾಧಿಗಳ ಗುಂಪಿನಲ್ಲಿ ಆಗಮಿಸಿದ್ದ ಇಬ್ಬರು ಮಹಿಳಾ ಭಕ್ತಾಧಿಗಳನ್ನು ಕೇರಳ ಪೊಲೀಸರು ಇಂದು ಬಂಧಿಸಿದ್ದಾರೆ.

ತಿರುವನಂತಪುರಂ: ಆಂಧ್ರ ಪ್ರದೇಶದ ಗುಂಟೂರಿನಿಂದ ಪುರುಷ ಭಕ್ತಾಧಿಗಳ ಗುಂಪಿನಲ್ಲಿ ಆಗಮಿಸಿದ್ದ ಇಬ್ಬರು ಮಹಿಳಾ ಭಕ್ತಾಧಿಗಳನ್ನು ಕೇರಳ ಪೊಲೀಸರು ಇಂದು ಬಂಧಿಸಿದ್ದಾರೆ.

ಆಂಧ್ರ ಪ್ರದೇಶದಿಂದ ಬಂದಿದ್ದ ಯಾತ್ರಾರ್ಥಿಗಳ ಗುಂಪಿನಲ್ಲಿ  ಮಹಿಳಾ ಭಕ್ತಾಧಿಗಳ ಬಂದಿದ್ದಾರೆ.  ಆದರೆ, ಶಬರಿಮಲೆಯಲ್ಲಿ ವಿಶೇಷ ಆಚರಣೆ ಬಗ್ಗೆ ಏನೂ ಗೊತ್ತಿಲ್ಲ. ಇವರನ್ನು ನೋಡಿದ ಕೆಲವರು ಹಿಂದಕ್ಕೆ ಹೋಗುವಂತೆ ಹೇಳಿದ್ದಾರೆ. ಆದರೆ, ಹಿಂದೆ ಹೋಗಲು ಒಪ್ಪದ ಅವರು ನಿಲಕ್ಕಲ್ ಗೆ ವಾಪಾಸ್ ಹೋಗಲು ಬಯಸಿದ್ದರು ಎಂದು ಐಜಿ ಎಸ್ . ಶ್ರೀಜಿತ್ ತಿಳಿಸಿದ್ದಾರೆ.

ಅಯ್ಯಪ್ಪ ದೇವಸ್ಥಾನ ಮುಚ್ಚುವ ಬೆದರಿಯ ನಡುವೆ  ಟ್ರಾವಂಕೂರು ದೇವಸ್ವಂ ಮಂಡಳಿ ಮತ್ತು  ಎಲ್ ಡಿಎಫ್ ಸರ್ಕಾರ ಇಡೀ ಪರಿಸ್ಥಿತಿಯ ಪರಾಮರ್ಶೆ ನಡೆಸುವುದಾಗಿ ಹೇಳಿಕೆ ನೀಡಿವೆ.

ಶಬರಿಮಲೆ ಸನ್ನಿಧಾನದಲ್ಲಿ ಅಶಿಸ್ತು ಎಲೆ ಮೀರದಂತೆ  ಕ್ರಮ ಕೈಗೊಳ್ಳಲಾಗುವುದು, ಅಂತೆಯೇ ಈ ವಿಚಾರದಲ್ಲಿ ಟಿಡಿಬಿ ಸೂಕ್ತ ಕ್ರಮ ಕೈಗೊಳ್ಳಬಹುದೆಂದು  ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ.

ವಿಶೇಷ ಭದ್ರತೆಯೊಂದಿಗೆ ಕೇರಳ ದಲಿತ ಮಹಿಳಾ ಒಕ್ಕೂಟದ ಅಧ್ಯಕ್ಷೆ ಎಸ್ ಪಿ ಮಂಜು ಶಬರಿಮಲೆಗೆ ಭೇಟಿಗೆ ಯತ್ನಿಸಿದ್ದರು. ಮಂಜು ಮೇಲೆ ಸುಮಾರು 14 ಅಪರಾಧ ಸಂಬಂಧಿತ ಕೇಸ್ ಗಳಿದ್ದು, ಅಯ್ಯಪ್ಪ ದರ್ಶನ ಪಡೆಯಲು ಭದ್ರತೆ ನೀಡುವಂತೆ ಮೊದಲ ಬಾರಿಗೆ ಪೊಲೀಸರಿಗೆ ಮನವಿ ಸಲ್ಲಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇಂದ್ರ ಬಜೆಟ್ 2026: Operation Sindoor ನಂತರ, ಭಯೋತ್ಪಾದಕ ಬೆದರಿಕೆಗಳ ನಡುವೆ ರಕ್ಷಣಾ ವೆಚ್ಚದಲ್ಲಿ ದಾಖಲೆ ಹೆಚ್ಚಳ!

Union Budget 2026: 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ಶೇ. 41ರಷ್ಟು ತೆರಿಗೆ ಹಂಚಿಕೆ - ನಿರ್ಮಲಾ ಸೀತಾರಾಮನ್

ಕೇಂದ್ರ ಬಜೆಟ್ 2026: ಯುವ ಜನತೆಗೆ ಅವಕಾಶಗಳ ಹೆಬ್ಬಾಗಿಲು- ಪ್ರಧಾನಿ ನರೇಂದ್ರ ಮೋದಿ

Union Budget 2026: 'ಕರ್ತವ್ಯ ಮಂತ್ರ' ಪಠಿಸಿದ ನಿರ್ಮಲಾ; ಹೂಡಿಕೆ, ಉದ್ಯೋಗ, ಉತ್ಪಾದನೆಗೆ ಒತ್ತು

Union Budget 2026: ನಾರಿ ಶಕ್ತಿ, ರೈತರು, ಕೃಷಿಯಲ್ಲಿ ಮೀನುಗಾರಿಕೆ, AIಗೆ ಆದ್ಯತೆ

SCROLL FOR NEXT