ದೇಶ

ನಕಲಿ ಸೌಂದರ್ಯವರ್ಧಕಗಳ ಮಾರಾಟ, ಅಮೇಜಾನ್, ಫ್ಲಿಪ್ ಕಾರ್ಟ್ ಗೆ ನೋಟಿಸ್!

Srinivasamurthy VN
ನವದೆಹಲಿ: ನಕಲಿ ಸೌಂದರ್ಯವರ್ಧಕಗಳ ಮಾರಾಟ ಮಾಡುತ್ತಿದ್ದ ಗಂಭೀರ ಆರೋಪದ ಮೇರೆಗೆ ಖ್ಯಾತ ಆನ್ ಲೈನ್ ಶಾಪಿಂಗ್ ತಾಣಗಳಾದ ಅಮೇಜಾನ್ ಮತ್ತು ಫ್ಲಿಪ್ ಕಾರ್ಟ್ ಸಂಸ್ಥೆಗಳಿಗೆ ಕೇಂದ್ರ ಔಷಧ ನಿಯಂತ್ರಣ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಕೆಲ ಖ್ಯಾತ ಸಂಸ್ಥೆಗಳ ನಕಲಿ ಸೌಂದರ್ಯ ವರ್ಧಕಗಳೂ ಸೇರಿದಂತೆ ಪರವಾನಗಿ ರಹಿತ ಸಂಸ್ಥೆಗಳು ತಯಾರಿಸಿರುವ ಸೌಂದರ್ಯ ವರ್ಧಕಗಳ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಅಮೇಜಾನ್ ಮತ್ತು ಫ್ಲಿಪ್ ಕಾರ್ಟ್ ಗೆ ಕೇಂದ್ರ ಔಷಧ ನಿಯಂತ್ರಣಾಲಯ ನೋಟಿಸ್ ಜಾರಿ ಮಾಡಿದೆ. ಅಂತೆಯೇ ನೋಟಿಸ್ ಗೆ 10 ದಿನಗಳಲ್ಲಿ ಉತ್ತರಿಸುವಂತೆ ಸೂಚನೆ ನೀಡಿದೆ.
ಕಳೆದ ಅಕ್ಟೋಬರ್ 5 ಮತ್ತು 6 ರಂದು ದೇಶದ ವಿವಿಧೆಡೆ ಕೇಂದ್ರ ಔಷಧ ನಿಯಂತ್ರಣ ವಿಭಾಗ ಅಧಿಕಾರಿಗಳು ದಾಳಿ ನಡೆ ಹಲವು ನಕಲಿ ಔಷಧಿಗಳನ್ನು ಪತ್ತೆ ಮಾಡಿದ್ದರು. ಈ ಪೈಕಿ ಹಲವು ನಕಲಿ ಔಷಧಿ ಮತ್ತು ನಕಲಿ ಸೌಂದರ್ಯ ವರ್ಧಕಗಳು ಪತ್ತೆಯಾಗಿದ್ದವು. ಅಲ್ಲದೆ ಸೂಕ್ತ ಪರವಾನಗಿ ಇಲ್ಲದ ಹಲವು ವಿದೇಶಿ ಸೌಂದರ್ಯವರ್ಧಕಗಳೂ ಕೂಡ ಪತ್ತೆಯಾಗಿದ್ದವು. 
ಈ ಕುರಿತು ಅಮೇಜಾನ್ ವಕ್ತಾರರು ಪ್ರತಿಕ್ರಿಯೆ ನೀಡಿದ್ದು, ಸಂಸ್ಥೆಯಿಂದ ತೊಂದರೆಯಾಗಿದ್ದರೆ, ಸಂಬಂಧ ಪಟ್ಟ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. 
SCROLL FOR NEXT