2019 ಲೋಕಸಭಾ ಚುನಾವಣೆ: ಬಿಜೆಪಿ-ಜೆಡಿ(ಯು) 50-50 ಸ್ಥಾನ ಹಂಚಿಕೆಗೆ ಎಲ್ ಜೆಪಿ, ಆರ್ ಎಸ್ಎಲ್ ಪಿ ವಿರೋಧ
ಪಾಟ್ನಾ: ಲೋಕಸಭಾ ಚುನಾವಣೆಗೆ ಬಿಹಾರದಲ್ಲಿ 50-50 ಸ್ಥಾನಗಳನ್ನು ಹಂಚಿಕೊಳ್ಳುವ ವಿಷಯದಲ್ಲಿ ಬಿಜೆಪಿ-ಎನ್ ಡಿಎ ಮೈತ್ರಿಕೂಟ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ.
40 ಲೋಕಸಭಾ ಕ್ಷೇತ್ರಗಳಲ್ಲಿರುವ ಬಿಹಾರದಲ್ಲಿ ಎನ್ ಡಿಎ ಮೈತ್ರಿಕೂಟದ ನಾಲ್ಕು ಪಕ್ಷಗಳ ನಡುವೆ ಸ್ಥಾನ ಹೊಂದಾಣಿಕೆಯಾಗಬೇಕಿದ್ದು ಜೆಡಿಯು-ಬಿಜೆಪಿ ಮುಂದಿಟ್ಟಿರುವ 50-50 ಸ್ಥಾನಗಳ ಹಂಚಿಕೆಯನ್ನು ಎಲ್ ಜೆಪಿ ಆರ್ ಎಸ್ ಎಲ್ ಪಿ ವಿರೋಧಿಸಿವೆ. ಎಲ್ ಜೆಪಿ ಉತ್ತರ ಪ್ರದೇಶ ಹಾಗೂ ಜಾರ್ಖಂಡ್ ಗಳಲ್ಲಿ ಹೆಚ್ಚಿನ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದರೆ, ಕೇಂದ್ರ ಸಚಿವ ಸಂಪುಟದಲ್ಲಿರುವ ಆರ್ ಎಲ್ಎಸ್ ಪಿ ನಾಯಕ ಬಿಹಾರದಲ್ಲಿ ಮೂರಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ.
ಮೂಲಗಳ ಪ್ರಕಾರ ಬಿಹಾರ ಲೋಕಸಭಾ ಸ್ಥಾನಗಳ ಹಂಚಿಕೆಗೆ ಸಂಬಂಧಿಸಿದಂತೆ ಎನ್ ಡಿಎ ಮೈತ್ರಿಕೂಟದಲ್ಲಿರುವ ಇನ್ನಿತರ ಸಣ್ಣ ಪಕ್ಷಗಳೂ ಸಹ ಸ್ಥಾನ ಹಂಚಿಕೆಯ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿವೆ. ಈಗಿರುವ ಯೋಜನೆಯ ಪ್ರಕಾರ ಬಿಜೆಪಿ ಹಾಗೂ ಜೆಡಿಯು 17 ಸ್ಥಾನಗಳಲ್ಲಿ ಸ್ಪರ್ಧ್ಸಿಅಲಿವೆ ಎಲ್ ಜೆಪಿ ಹಾಗೂ ಆರ್ ಎಲ್ ಎಸ್ ಪಿಗಳಿಗೆ ಅನುಕ್ರಮವಾಗಿ 4 ಹಾಗೂ 2 ಸ್ಥಾನಗಳು ಸಿಗಲಿವೆ.