ದೇಶ

ನವದೆಹಲಿ: 27 ಎಎಪಿ ಶಾಸಕರ ಅನರ್ಹತೆಗೆ ರಾಷ್ಟ್ರಪತಿ ನಕಾರ!

Raghavendra Adiga
ನವದೆಹಲಿ: ದೆಹಲಿ ಎಎಪಿ ಶಾಸಕರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ದೊಡ್ಡ ರಿಲೀಫ್ ನಿಡಿದ್ದಾರೆ.ಲಾಭದಾಯಕ ಹುದ್ದೆಯಲ್ಲಿದ್ದ ವ ದೆಹಲಿಯ 27 ಆಮ್ ಆಡ್ಮಿ ಪಾರ್ಟಿ ಶಾಸಕರನ್ನು ಅನರ್ಹಗೊಳಿಸಬೇಕೆಂದು ಸಲ್ಲಿಕೆಯಾಗಿದ್ದ ಮನವಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ.
ಜುಲೈನಲ್ಲಿ ಚುನಾವಣಾ ಆಯೋಗ (ಇಸಿ) ನೀಡಿದ್ದ ಅಭಿಪ್ರಾಯದ ಆಧಾರದ ಮೇಲೆ ರಾಷ್ಟ್ರಪತಿಗಳು ಅರ್ಜಿಯನ್ನು ವಜಾಗೊಳಿಸಿದ್ದಾರೆ ಎಂದು ಹೇಳಲಾಗಿದೆ.
ಇಂತಹಾ ಮನವಿಗಳನ್ನು ಚುನಾವಣಾ ಆಯೋಗವು ರಾಷ್ಟ್ರಪತಿಗಳಿಗೆ ರವಾನಿಸಿದರೆ ರಾಷ್ಟ್ರಪತೊಗಳು ನೀಡಿದ ಆದೇಶದಂತೆ ಆಯೋಗ ತನ್ನ ಭಿಪ್ರಾಯವನ್ನು ನೀಡಲಿದೆ.
ಏಪ್ರಿಲ್ 26ರಂದು ದೆಹಲಿ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನೀಡಿದ ಆದೇಶದಂತೆ,"ರೋಗಿ ಕಲ್ಯಣ್ ಸಮಿತಿಗಳು" ರೋಗಿಗಳ ಆರೋಗ್ಯ ಸೌಲಭ್ಯ ಕುರಿತು ಅಭಿವೃದ್ದಿ ಕಾರ್ಯತಂತ್ರ ಮಂಡಿಸುವ ಸಮಿತಿಗಳಾಗಿದೆ.
2016ರಲ್ಲಿ ವಕೀಲರೊಬ್ಬರು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರಿನನ್ವಯ ದೆಹಲಿ ಸರ್ಕಾರದಲ್ಲಿನ 27  ಎಎಪಿ ಶಾಸಕರು ರೋಗಿ ಕಲ್ಯಾಣ ಸಮಿತಿಯಲ್ಲಿ ಸಕ್ರಿಯರಾಗಿದ್ದುದಲ್ಲದೆ ಪ್ರತಿ ರೋಗಿ ಕಲ್ಯಾಣ ಸಮಿತಿಯು ಸಹ ವಾರ್ಷಿಕ 3 ಲಕ್ಷ ದೇಣಿಗೆ ಸಲ್ಲಿಕೆಯಾಗುತ್ತುದೆ ಎನ್ನಲಾಗಿತ್ತು.
SCROLL FOR NEXT