ದೇಶ

ಸೂರತ್‌ ಉದ್ಯಮಿ ಧೋಲಕಿಯಾರಿಂದ ದೀಪಾವಳಿಗೆ 600 ನೌಕರರಿಗೆ ಕಾರು ಗಿಫ್ಟ್

Lingaraj Badiger
ನವದೆಹಲಿ: ತಮ್ಮ ಕಂಪನಿಯ ನೌಕರರಿಗೆ ದುಬಾರಿ ಉಡುಗೊರೆಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿರುವ ಸೂರತ್ ಮೂಲದ ವಜ್ರದ ಉದ್ಯಮಿ ಸಾವಜಿ ಧೋಲಕಿಯಾ ಅವರು ಈ ಬಾರಿ ದೀಪಾವಳಿಗೆ 600 ನೌಕರರಿಗೆ ಕಾರು ಉಡುಗೊರೆ ನೀಡಲಿದ್ದಾರೆ.
ಹರೇ ಕೃಷ್ಣ ಎಕ್ಸ್‌ಪೋರ್ಟರ್ಸ್ ಕಂಪೆನಿಯ ಮಾಲೀಕರಾಗಿರುವ ಧೋಲಕಿಯಾ ಅವರು ಈ ಹಿಂದೆ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಫ್ಲಾಟ್ ಹಾಗೂ ದುಬಾರಿ ಕಾರು ಗಿಫ್ಟ್ ನೀಡಿ ಸುದ್ದಿಯಾಗಿದ್ದರು. ಅಲ್ಲದೆ ಇತ್ತೀಚಿಗೆ ತಮ್ಮ ಕಂಪನಿಯಲ್ಲಿ 25 ವರ್ಷ ಪೂರೈಸಿದ ಮೂವರು ನೌಕರರಿಗೆ ಸುಮಾರು 3 ಕೋಟಿ ರು. ಮೌಲ್ಯದ ಮರ್ಸೆಡಿಸ್‌ ಬೆಂಜ್‌ ಜಿಎಲ್‌ಎಸ್‌ 350 ಡಿ ಎಸ್‌ಯುವಿ ವಾಹನವನ್ನು ಉಡುಗೊರೆಯಾಗಿ ನೀಡಿದ್ದರು.
ಒಟ್ಟು 1500 ಉದ್ಯೋಗಿಗಳಲ್ಲಿ 900 ಜನರ ಹೆಸರಿನಲ್ಲಿ ಸ್ಥಿರ ಠೇವಣಿ ಪ್ರಮಾಣಪತ್ರ ನೀಡಲಿದ್ದು, 600 ಜನರಿಗೆ ಕಾರನ್ನು ನೀಡಲಾಗುವುದು ಎಂದು ಧೋಲಕಿಯಾ ಅವರು ಹೇಳಿದ್ದಾರೆ. 
ಕಳೆದ ಬಾರಿಯ ದೀಪಾವಳಿಯಲ್ಲೂ ಉದ್ಯೋಗಿಗಳಿಗೆ ದುಬಾರಿ ಉಡುಗೊರೆಗಳನ್ನು ನೀಡಿ ಅವರು ಸುದ್ದಿಯಾಗಿದ್ದರು. ಈ ಮೂಲಕ ನೌಕರರಿಗೆ ದೀಪಾವಳಿಯ ಸಂದರ್ಭದಲ್ಲಿ ಬಿಂದಾಸ್‌ ಉಡುಗೊರೆಗಳನ್ನು ಕೊಡುವ ದೇಶದ ಅತ್ಯಪರೂಪದ ಉದ್ಯಮಿಯಾಗಿ ಧೋಲಕಿಯಾ ಗುರುತಿಸಿಕೊಂಡಿದ್ದಾರೆ.
SCROLL FOR NEXT