ರಾಹುಲ್ ಗಾಂಧಿ 
ದೇಶ

ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಶೇ. 50 ರಷ್ಟು ಮಹಿಳೆಯರು ಮುಖ್ಯಮಂತ್ರಿಗಳಾಗಬೇಕು - ರಾಹುಲ್

ಮುಂದಿನ ಐದರಿಂದ ಏಳು ವರ್ಷದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಶೇ, 50 ರಷ್ಟು ಮಹಿಳಾ ಮುಖ್ಯಮಂತ್ರಿಗಳು ಇರಬೇಕು ಎಂಬುದು ತಮ್ಮ ಇಚ್ಚೆಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಕೊಟಾ: ಕಾಂಗ್ರೆಸ್ ಪಕ್ಷದ ವಿವಿಧ ಅಂಗಗಳಲ್ಲಿ   ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಸಹಭಾಗಿತ್ವವನ್ನು  ಬೆಂಬಲಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮುಂದಿನ ಐದರಿಂದ ಏಳು ವರ್ಷದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಶೇ, 50 ರಷ್ಟು ಮಹಿಳಾ ಮುಖ್ಯಮಂತ್ರಿಗಳೇ ಇರಲಿದ್ದಾರೆ ಎಂದು ಹೇಳಿದ್ದಾರೆ.

ರಾಜಸ್ತಾನದ ಕೊಟಾದಲ್ಲಿ ರಾಜ್ಯಮಟ್ಟದ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಮಹಿಳೆಯರನ್ನು ಬೆಂಬಲಿಸುತ್ತಿದ್ದರೆ ಬಿಜೆಪಿ ಹಾಗೂ ಆರ್ ಎಸ್ ಎಸ್ ನಲ್ಲಿರುವ ಮಹಿಳೆಯರು ಮನೆ ಬಿಟ್ಟು ಹೊರಗೆ ಹೋಗದಂತಾಗಿದೆ ಎಂದು  ಟೀಕಿಸಿದರು.

 ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ವ್ಯತ್ಯಾಸ ಇದಾಗಿದ್ದು, ಮಹಿಳೆಯರು ಮನೆಯಿಂದ ಹೊರಗೆ ಹೋಗದಂತೆ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತದೆ. ಆರ್ ಎಸ್ ಎಸ್ ಸಭೆಗಳಲ್ಲಿ ಒಬ್ಬ ಮಹಿಳಾ ಪ್ರತಿನಿಧಿಯನ್ನು ನೋಡಲು ಸಾಧ್ಯವಿಲ್ಲ. ಅಲ್ಲಿ ಎಲ್ಲವೂ ಪುರುಷರಿಂದಲೇ ನಿರ್ಧರಿತವಾಗುತ್ತದೆ. ರಾಜಸ್ತಾನದ ಮಹಿಳಾ ಮುಖ್ಯಮಂತ್ರಿ ಮಹಿಳೆಯರ ಪರ ಚಿಂತಿಸುವುದಿಲ್ಲ ಎಂದು ಆರೋಪಿಸಿದರು.

ಪಕ್ಷ ಸಂಘಟನೆಯಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿದ್ಯ ನೀಡುವುದು ತಮ್ಮ ಗುರಿಯಾಗಿದೆ, ಜಿಲ್ಲಾಪರಿಷತ್, ಶಾಸಕ ಹಾಗೂ ಸಂಸದರ ಸ್ಥಾನಕ್ಕೆ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು ಮುಂದಿನ ಐದಾರು ವರ್ಷಗಳಲ್ಲಿ ಪಕ್ಷದಲ್ಲಿ  ಅರ್ಧದಷ್ಟು ಮಹಿಳೆಯರೇ ಮುಖ್ಯಮಂತ್ರಿಯಾಗಬೇಕು ಎಂಬುದು ತಮ್ಮ ಇಚ್ಚೆಯಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

India-Pakistan ಯುದ್ಧವನ್ನು ನಾನು ತಡೆಯದೇ ಹೋಗಿದ್ದರೆ 3.5 ಕೋಟಿ ಜನರು ಸಾಯುತ್ತಿದ್ದರು: ಡೊನಾಲ್ಡ್ ಟ್ರಂಪ್

ಪ್ರಧಾನಿ ಮೋದಿ ಎರಡು ದಿನಗಳ ಇಸ್ರೇಲ್‌ ಪ್ರವಾಸ ಆರಂಭ; ಸಂಸತ್ತು ನೆಸ್ಸೆಟ್ ಭಾಷಣ ಮಾಡುವ ಮೊದಲ ಭಾರತ ಪ್ರಧಾನಿ-Video

ಮಾಜಿ ಪ್ರೇಯಸಿಯ ಮದುವೆಗೆ ಬಂದು ಗುಂಡು ಹಾರಿಸಿದ ಭಗ್ನ ಪ್ರೇಮಿ, Video ವೈರಲ್!

Epstein ties ಆರೋಪದ ಕುರಿತು ಮೌನ ಮುರಿದ ಬಿಲ್ ಗೇಟ್ಸ್; ಉದ್ಯಮಿ ಹೇಳಿದ್ದೇನು?

ಹಾರ್ನ್ ಮಾಡುವ ವಿಚಾರಕ್ಕೆ ಗಲಾಟೆ: 65ರ ವೃದ್ಧನ ಮೇಲೆ ಮನಸೋ ಇಚ್ಛೆ ಹಲ್ಲೆ, ರೌಡಿಶೀಟ್ ಗೆ ಪೊಲೀಸರ ಸಿದ್ಧತೆ? Video

SCROLL FOR NEXT