ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್
ನವದೆಹಲಿ: ಗಣರಾಜ್ಯೋತ್ಸವ ದಿನಾಚರಣೆಗಳಲ್ಲಿ ಮುಖ್ಯ ಅತಿಥಿಯಾಗಬೇಕೆಂಬ ಭಾರತ ಆಹ್ವಾನವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ ಎಂದು ಆಂಗ್ಲ ಸುದ್ದಿಮಾದ್ಯಮ ಎನ್ಡಿಟಿವಿ ವರದಿ ಮಾಡಿದೆ.
ಚಳಿಗಾಲದ ತಿಂಗಳಿನಲ್ಲಿ ಟ್ರಂಪ್ ಪ್ರವಾಸದ ವೇಳಾಪಟ್ಟಿಯನ್ನು ಹೊಂದಿರುವ ಅಮೆರಿಕಾ ಅಧಿಕಾರಿಗಳ ಮಾಹಿತಿಯಂತೆ ಟ್ರಂಪ್ ಜನವರಿಗೆ ಭಾರತಕ್ಕೆ ಆಗಮಿಸುತ್ತಿಲ್ಲ.
ಆದರೆ ಭಾರತ್ದ ವಿದೇಶಾಂಗ ವ್ಯವಹಾರಗಲ ಸಚಿವಾಲಯ ಮಾತ್ರ ಇದುವರೆಗೆ ಈ ಸಂಬಂಧ ಯಾವ ಅಧಿಕೃತ ಹೇಳಿಕೆ ನೀಡಿಲ್ಲ.
ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಛೇರಿ ಹೇಳುವಂತೆ ಅಮೆರಿಕಾ ಅಧ್ಯಕ್ಷರ ಪ್ರವಾಸ ಸಂಬಂಧದ ವಿವರಗಳು ಕೇವಲ ವೈಟ್ ಹೌಸ್ ನಲ್ಲಿದ್ದವರಿಗೆ ಮಾತ್ರ ತಿಳಿದಿರಲಿದೆ.
ಭಾರತವು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮುಂದಿನ ಗಣರಾಜ್ಯೋತ್ಸವಕ್ಕೆ ಆಗಮಿಸುವಂತೆ ಕಳೆದ ಏಪ್ರಿಲ್ ನಲ್ಲಿಯೇ ಆಹ್ವಾನಪತ್ರ ಕಳಿಸಿತ್ತು. ಪ್ರತಿ ವರ್ಷ ಗಣರಾಜ್ಯ ದಿನಕ್ಕೆ ಜಗತ್ತಿನ ವೊವೊಧ ರಾಷ್ಟ್ರಗಲ ಗಣ್ಯ ಅತಿಥಿಗಳನ್ನು ಆಹ್ವಾನಿಸುವ ವಾಡಿಕೆ ಇದ್ದು ಈ ಸಾಲಿನಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಗೆ ಆಹ್ವಾನ ನೀಡಲಾಗಿತ್ತು.
ಇದಕ್ಕೆ ಮುನ್ನ ಆಗಸ್ಟ್ ತಿಂಗಳಿನಲ್ಲಿ ಶ್ವೇತಭವನದ ಮಾದ್ಯಮ ಕಾರ್ಯದರ್ಶಿ ಸಾರಾ ಅಮೆರಿಕಾ ಅಧ್ಯಕ್ಷರು ಭಾರತದ ಆಹ್ವಾನ ಸ್ವೀಕರಿಸಿದ್ದಾರೆ ಎಂದು ಹೇಳಿದ್ದರು.