ಶ್ರೀನಗರ: ಬಾಂಬ್, ಗುಂಡು ಹಾಗೂ ಗ್ರೆನೇಡ್ ಗಳಿಂದ ದಾಳಿ ನಡೆಸಿ ಭಾರತೀಯ ಯೋಧರಲ್ಲಿ ಭೀತಿ ಹುಟ್ಟಿಸಲು ಯತ್ನ ನಡೆಸುತ್ತಿದ್ದ ಪಾಕಿಸ್ತಾನ ಮೂಲಕ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಇದೀಗ ಕಾಶ್ಮೀರಕ್ಕೆ ಸ್ನೈಪರ್ ಗಳನ್ನು ರವಾನಿಸಿರುವ ಆತಂಕಕಾರಿ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ.
ದೂರದ ರಹಸ್ಯ ಸ್ಥಳದಳಲ್ಲಿ ಕುಳಿತು ನಿಖರವಾಗಿ ದಾಳಿ ನಡೆಸುವ ಹಂತಕರು/ಶಾರ್ಪ್ ಶೂಟರ್ ಗಳನ್ನು ಸ್ನೈಪರ್ ಗಳೆಂದು ಕರೆಯಲಾಗುತ್ತದೆ. ರೈಫಲ್ ಅಥವಾ ಗನ್ ಮೂಲಕ ದೂರದಿಂದಲೇ ನಿಖರವಾಗಿ ದಾಳಿ ನಡೆಸುವ ಕುರಿತು ಇವರಿಗೆ ತರಬೇತಿ ನೀಡಲಾಗಿರುತ್ತದೆ.
ಕಳೆದ ಕೆಲ ವರ್ಷಗಳಿಂದ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿರುವ ಹಿನ್ನಲೆಯಲ್ಲಿ ನೇರಾನೇರಾ ದಾಳಿ ನಡೆಸಲು ಧೈರ್ಯವಿಲ್ಲದೆ. ಹೇಡಿತನದ ಕೃತ್ಯಕ್ಕೆ ಹಾಕಿದೆ.
ಪುಲ್ವಾಮದಲ್ಲಿ ನಿನ್ನೆಯಷ್ಟೇ ಸ್ನೈಪರ್ ಗಳ ಗುಂಡಿನ ದಾಳಿಗೆ ಸಬ್ ಇನ್ಸ್'ಪೆಕ್ಟರ್ ಇಮ್ತಿಯಾಜ್ ಮೀರ್ ಅವರು ಬಲಿಯಾಗಿದ್ದಾರೆ.
ಇದಲ್ಲದೆ, ಸೆಪ್ಟೆಂಬರ್ ಮಧ್ಯಭಾಗದಿಂದ ಇದೂವರೆಗೆ ಸೇನೆ, ಸಶಸ್ತ್ರ ಸೀಮಾ ಬಲ ಮತ್ತು ಸಿಐಎಸ್ಎಫ್ ಸೇರಿ ತಲಾ ಒಬ್ಬರು ಯೋಧರು ಬಲಿಯಾಗಿದ್ದಾರೆ. ಸಿಆರ್'ಪಿಎಫ್'ನ ಸಿಪಾಯಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಸ್ನೈಪರ್ ಉಗ್ರರಿಂದ ಮತ್ತಷ್ಟು ದಾಳಿ ನಡೆಯುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ತಂತ್ರಗಾರಿಕೆ ಬದಲಾಯಿಸಿಕೊಳ್ಳಲಿ ಇದೀಗ ಸೇನಾಪಡೆಗಳು ಚಿಂತನೆ ನಡೆಸುತ್ತಿವೆ. ಈ ನಡುವೆ ಸ್ನೈಪರ್ ದಾಳಿ ನಡೆಸುವ ಉಗ್ರರ ತಂತ್ರಗಾರಿಕೆ ಕಾಶ್ಮೀರದ ರಾಜಕಾರಣಿಗಳಲ್ಲೂ ನಡುಕ ಹುಟ್ಟಿಸಿದೆ.
ಭದ್ರತಾ ಮೂಲಗಳು ನೀಡಿರುವ ಮಾಹಿತಿಗಳ ಪ್ರಕಾರ, ತಲಾ ಇಬ್ಬರು ಸದಸ್ಯರನ್ನೊಳಗೊಂಡ 2 ತಂಡಗಳು ಅಂದಲೆ ನಾಲ್ಕು ಉಗ್ರರ ಸ್ನೈಪರ್ ತಂಡ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ.
ಈ ಉಗ್ರರಿಗೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ತರಬೇತಿ ನೀಡಿರುವುದಾಗಿ ಹೇಳಲಾಗುತ್ತಿದ್ದು, ಆಫ್ಘಾನಿಸ್ತಾನದಲ್ಲಿ ಅಮೆರಿಕಾ ನೇತೃತ್ವದ ಪಡೆಗಳು ಬಳಸುವ ಎಂ.4 ಕಾರ್ಬೈನ್ಸ್ ಎಂಬ ವಿಶೇಷ ಸೌಲಭ್ಯ ಹೊಂದಿದ ಬಂದೂಕು ಬಳಕಿ ಉಗ್ರರು ದಾಳಿ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಪ್ರಸ್ತುತ ಉಗ್ರರು ಬಳಕೆ ಮಾಡುತ್ತಿರುವ ಬಂದೂಕುಗಳಲ್ಲಿ ಟೆಲಿಸ್ಕೋಪ್ ಇರುತ್ತದೆ. ರಾತ್ರಿ ಹೊತ್ತು ಗುರಿ ವೀಕ್ಷಿಸಬಹುದಾದ ಅವಕಾಶವಿರುತ್ತದೆ. 500ರಿಂದ 600 ಮೀಟರ್ ದೂರದಿಂದಲೇ ಅತ್ಯಂತ ನಿಖರವಾಗಿ ದಾಳಿ ಮಾಡಬಹುದಾದ ಸಾಮರ್ಥ್ಯವನ್ನು ಈ ಬಂದೂಕು ಹೊಂದಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics