ದೇಶ

ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ?

Raghavendra Adiga
ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧಿಸುವ ಸಂಪ್ರದಾಯಕ್ಕೆ ಬೆಂಬಲ ಸೂಚಿಸಿ ಅಯ್ಯಪ್ಪ ಭಕ್ತರ ಪರ ನಿಂತಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈಗ ತಾವೂ ಅಯ್ಯಪ್ಪನ ದರ್ಶನಕ್ಕೆ ಬಯಸಿದ್ದಾರೆ.
ಇದೇ ನವೆಂಬರ್ 17ರಿಂದ ಶಬರಿಮಲೆಯ ಈ ವರ್ಷದ ಮಂಡಲ ಪೂಜಾ ಕೈಂಕರ್ಯಗಳು ಪ್ರಾರಂಬವಾಗಲಿದೆ.ಈ ವೇಳೆ ಅಮಿತ್ ಶಾ ತಾವು ಬೆಟ್ಟದ ಮೇಲಿನ ಯ್ಯಪ್ಪಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಯೋಜನೆ ಇದೆ ಎನ್ನಲಾಗಿದೆ.
"ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡಬೇಕೆಂದು ಅಮಿತ್ ಶಾ ಬಯಸಿದ್ದಾರೆ. ಆದರೆ ಈ ಸಂಬಂಧ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ" ಕೇರಳ ಬಿಜೆಪಿ ಹಿರಿಯ ನಾಯಕರು ಹೇಳಿದ್ದಾರೆ.
ದೇವಾಲಯದ ಆವರಣಕ್ಕೆ 10-50 ವಯೋಮಾನದ ಮಹಿಳೆಯರ ಪ್ರವೇಶ ನಿಷೇಧವನ್ನು ಹಿಂಪಡೆಯುವ ಸುಪ್ರೀಂ ಆದೇಶ ಜಾರಿಗೆ ಮುಂದಾಗಿರುವ ಸಿಪಿಎಂ-ನೇತೃತ್ವ ಎಡಪಂಥೀಯ ಪ್ರಜಾಸತ್ತಾತ್ಮಕ ಸರ್ಕಾರದ ನಿರ್ಧಾರದ ವಿರುದ್ಧ ಅಯ್ಯಪ್ಪ ಭಕ್ತರಿಗೆ ತನ್ನ ಸಂಪೂರ್ಣ ಬೆಂಬಲವನ್ನು ಬಿಜೆಪಿ ಘೋಷಿಸಿದೆ.
ಶಬರಿಮಲೆ ಭಕ್ತಾದಿಗಳ ವಿರುದ್ಧ ಕೇರಳ ಸರ್ಕಾರ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳ ಕುರಿತಂತೆ ಕಳೆದ ವಾರ ಮಾತನಾಡಿದ್ದ ಶಾ ಇದು  "ತುರ್ತು ಪರಿಸ್ಥಿತಿ"ಯನ್ನು ನೆನಪಿಸುವಂತಾ ಆಡಳಿತ ಕ್ರಮ ಎಂದಿದ್ದರು. ಅಲ್ಲದೆ ಸರ್ಕಾರವು "ಬೆಂಕಿಯೊಂದಿಗೆ ಸರಸವಾಡುತ್ತಿದೆ"ಎಂದು ಆರೋಪಿಸಿದ್ದರು.
SCROLL FOR NEXT