ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಡಗಿ ಕುಳಿತು ಭಾರತೀಯ ಯೋಧರನ್ನು ಹತ್ಯೆ ಮಾಡುತ್ತಿರುವ ಪಾಕಿಸ್ತಾನದ ಸ್ನೈಪರ್ಸ್ ಪ್ರಕರಣ ಕುರಿತು ತನಿಖೆ ಮುಂದುವರೆದಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಸೋಮವಾರ ಹೇಳಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ಕೆಲ ಯೋಧರನ್ನು ಕಳೆದುಕೊಂಡಿದ್ದೇವೆ. ಯೋಧರ ಹತ್ಯೆಗೆ ಸ್ನೈಪರ್ ಗಳ ಕಾರಣ ಕುರಿತು ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ವರೆಗೂ ನಮಗೆ ಸ್ನೈಪರ್ಸ್ ಗಳ ಶಸ್ತ್ರಾಸ್ತ್ರ ಅಥವಾ ಬಂದೂಕುಗಳು ದೊರಕಿಲ್ಲ. ದಾಳಿ ನಡೆಸಿದ್ದು ಸ್ನೈಪರ್ಸ್ ಗಳೇ ಅಥವಾ ಅಲ್ಲವೇ ಎಂಬುದರ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿರುವ ಹಿನ್ನಲೆಯಲ್ಲಿ ನೇರಾನೇರಾ ದಾಳಿ ನಡೆಸಲು ಧೈರ್ಯವಿಲ್ಲದೆ ಪಾಕಿಸ್ತಾನ ಇದೀಗ ಹೇಡಿತನದ ಕೃತ್ಯಕ್ಕೆ ಹಾಕಿದೆ.
ತಲಾ ಇಬ್ಬರು ಸದಸ್ಯರನ್ನೊಳಗೊಂಡ 2 ತಂಡಗಳು ಅಂದರೆ ನಾಲ್ಕು ಉಗ್ರರ ಸ್ನೈಪರ್ ತಂಡ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಉಗ್ರರು ತಲೆಮರೆಸಿಕೊಂಡು ದೂರದಿಂದಲ್ ಸೇನಾ ಯೋಧರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಸ್ನೈಪರ್ಸ್ ಗಳ ದಾಳಿಗೆ ಈ ವರೆಗೂ ಮೂವರು ಯೋಧರು ಬಲಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics