ತಮಿಳುನಾಡು: ತನ್ನ ಲೈಂಗಿಕಾಸಕ್ತಿ ತಿರಸ್ಕರಿಸಿದ ದಲಿತ ಬಾಲಕಿಯ ತಲೆಕಡಿದ ನೆರೆಮನೆಯ ಕಾಮುಕ
ತನ್ನ ಲೈಂಗಿಕಾಸಕ್ತಿಯನ್ನು ತಿರಸ್ಕರಿಸಿದ 13 ವರ್ಷದ ದಲಿತ ಬಾಲಕಿಯನ್ನು ಆಕೆಯ ನೆರೆಮನೆಯಾತನೇ ತಲೆ ಕಡಿದು...
ಸೇಲಂ: ತನ್ನ ಲೈಂಗಿಕಾಸಕ್ತಿಯನ್ನು ತಿರಸ್ಕರಿಸಿದ 13 ವರ್ಷದ ದಲಿತ ಬಾಲಕಿಯನ್ನು ಆಕೆಯ ನೆರೆಮನೆಯಾತನೇ ತಲೆ ಕಡಿದು ಕೊಂದಿರುವ ಅಮಾನುಷ ಘಟನೆ ತಮಿಳು ನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ.
ದಲಿತ ಬಾಲಕಿಯನ್ನು ಕೊಂದ ಆರೋಪಿ ದಿನೇಶ್ ಕುಮಾರ್ ನನ್ನು ಬಂಧಿಸಿ ಸೇಲಂ ಜೈಲಿಗೆ ಹಾಕಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಸೇಲಂ ಜಿಲ್ಲೆಯ ಅತ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸವರ್ಣೀಯ ಆರೋಪಿಯ ಲೈಂಗಿಕ ದುರ್ವರ್ತನೆಯ ಬಗ್ಗೆ ಬಾಲಕಿಯ ಮನೆಯವರು ಆನೇಕ ಬಾರಿ ದೂರಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.
ಆರೋಪಿ ಮಾನಸಿಕ ಅಸ್ವಸ್ಥ ಎಂಬ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದ ಪೊಲೀಸರು, ದಿನೇಶ್ ತನಗೆ ಲೈಂಗಿಕ ಕಿರುಕುಳ ನೀಡುತ್ತಿರುವುದನ್ನು ಬಾಲಕಿ ಹಲವು ಬಾರಿ ತನ್ನ ತಾಯಿ ಬಳಿ ಹೇಳಿಕೊಂಡಿದ್ದಳು ಎಂದಿದ್ದಾರೆ.
ಹತ್ಯೆಗೀಡಾಗಿರುವ ಬಾಲಕಿಯು ಸಮೀಪದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಳು ಮತ್ತು ತನ್ನ ಹೆತ್ತವರ ಮೂವರು ಹೆಣ್ಣು ಮಕ್ಕಳಲ್ಲಿ ಕೊನೆಯವಳಾಗಿದ್ದಳು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.