ಬಲವಂತದ ಮತಾಂತರದಿಂದ ಭಾರತದ ಧಾರ್ಮಿಕ ಜನಸಂಖ್ಯೆಯಲ್ಲಿ ಬದಲಾವಣೆ: ಬಿಜೆಪಿ ತರಬೇತಿ ಕೈಪಿಡಿ
ಭಾರತದಲ್ಲಿರುವ ಮಾವೋವಾದಿಗಳ್;ಇಗೆ ಪಾಕಿಸ್ತಾನ, ಚೀನಾ ಬೆಂಬಲ ನೀಡುತ್ತಿದೆ ಎಂದು ಬಿಜೆಪಿ ಪ್ರಕಟಿಸಿರುವ ತರಬೇತಿ ಕೈಬಿಡಿ ಆರೋಪಿಸಿದೆ.
ಪಾಕ್ ಹಾಗೂ ಚೀನಾದಿಂದ ಬೆಂಬಲ ಪಡೆಯುತ್ತಿರುವ ಭಾರತದ ಮಾವೋವಾದಿಗಳು ಭಾರತದ ಆಂತರಿಕ ಭದ್ರತೆಗೆ ಅಪಾಯ ಎದುರಾಗುತ್ತಿದ್ದು, ಈಶಾನ್ಯ ರಾಜ್ಯಗಳಲ್ಲಿರುವ ಭಯೋತ್ಪಾದಕರೊಂದಿಗೆ ಸೇರಿ ಉಗ್ರ ಚಟುವಟಿಕೆಗಳಿಗೆ ನಕ್ಸಲರು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಕೈಪಿಡಿಯಲ್ಲಿ ಆರೋಪಿಸಲಾಗಿದೆ.
ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಬಂಧನಕ್ಕೊಳಗಾದ ನಕ್ಸಲ್ ಪರ ನಿಲುವು ಹೊಂದಿದ್ದ ಸಾಮಾಜಿಕ ಕಾರ್ಯಕರ್ತರ ಬಂಧನದ ನಂತರ ಮಾವೋವಾದಿಗಳು ಹಾಗೂ ಅವರಿಗೆ ಸಿಗುತ್ತಿರುವ ಬೆಂಬಲದ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಬಿಜೆಪಿ ತನ್ನ ಕೈಪಿಡಿಯಲ್ಲಿ ಮಾವೋವಾದಿಗಳ ಜೊತೆಗೆ ದೇಶದಲ್ಲಿ ನಡೆಯುತ್ತಿರುವ ಬಲವಂತದ ಮತಾಂತರದ ಬಗ್ಗೆಯೂ ಮಾತನಾಡಿದ್ದು, ಬಲವಂತದ ಮತಾಂತರದಿಂದ ಧಾರ್ಮಿಕ ಜನಸಂಖ್ಯೆಯಲ್ಲಿ ಬದಲಾವಣೆಯಾಗುತ್ತಿದ್ದು, ದೇಶಕ್ಕೆ ಆಂತರಿಕ ಅಪಾಯ ಎದುರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ.